ADVERTISEMENT

50 ವರ್ಷಗಳ ಹಿಂದೆ| ಬುಧವಾರ, ಜೂನ್‌ 21, 1972

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST
   

ಶರಾವತಿ ಕರ್ಮಕಾಂಡ: ನ್ಯಾಯಾಂಗ ತನಿಖೆಗಾಗಿ ಆಗ್ರಹ– ಸಭಾತ್ಯಾಗ

ಬೆಂಗಳೂರು, ಜೂನ್‌ 20– ಶರಾವತಿ ‘ಕರ್ಮಕಾಂಡ’ದ ವಿಚಾರಣೆಯಲ್ಲಿ ತನಿಖೆ ನಡೆಸುವ ಬಗ್ಗೆ ತಾವು ತೆರೆದ ಮನಸ್ಸಿನಿಂದ ಇರುವುದಾಗಿ ಮುಖ್ಯಮಂತ್ರಿ ಶ್ರೀಡಿ. ದೇವರಾಜ ಅರಸು ಅವರು ಭರವಸೆ ನೀಡಿದರೂ ನ್ಯಾಯಾಂಗ ವಿಚಾರಣೆಯ ಸ್ಪಷ್ಟ ಭರವಸೆಗಾಗಿ ಒತ್ತಾಯಪಡಿಸಿದ ವಿರೋಧ ಪಕ್ಷದ ಸದಸ್ಯರು ಸರ್ಕಾರದ ನಿಲುವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.

ವೀರೇಂದ್ರ ಪಾಟೀಲ್‌, ಎಸ್‌. ನಿಜಲಿಂಗಪ್ಪ ಮತ್ತು ಚನ್ನಬಸಪ್ಪ ಕಾಲದಲ್ಲಿ ನಡೆದ ಅಕ್ರಮಗಳ ತನಿಖೆ ನಡೆಯಬೇಕೆಂದು ಒತ್ತಾಯ ಮಾಡಿದ ವಿರೋಧ ಪಕ್ಷದ ಸದಸ್ಯರು, ನ್ಯಾಯಾಂಗ ವಿಚಾರಣೆಗೆ ಆಯೋಗ ರಚಿಸಬೇಕೆಂದು ಒತ್ತಾಯ ಮಾಡಿದರು.

ADVERTISEMENT

ಮದರಾಸು ಕರ್ನಾಟಕದ ಧಾರ್ಮಿಕ ದತ್ತಿ ದೇವಾಲಯಗಳ ಜಮೀನು ಕೃಷಿಕನಿಗೆ ನೀಡಲು ಮಸೂದೆ

ಬೆಂಗಳೂರು, ಜೂನ್‌ 20– ಹಿಂದಿನ ಮದ್ರಾಸ್‌ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಕೊಳ್ಳೇಗಾಲದ ದೇವಸ್ಥಾನ ಹಾಗೂ ಇನ್ನಿತರ ಧಾರ್ಮಿಕ ದತ್ತಿ ಜಮೀನುಗಳನ್ನು ವಶಪಡಿಸಿಕೊಂಡು, ಉಳುವವರಿಗೆ ವಹಿಸಿಕೊಡಲು ಅವಕಾಶ ಮಾಡಿಕೊಡುವ ವಿಧೇಯಕ ಇದೀಗ
ಸಿದ್ಧವಾಗುತ್ತಿದೆ.

ಮುಂಬೈ ಮತ್ತು ಹೈದರಾಬಾದ್‌ ಕರ್ನಾಟಕ ಪ್ರದೇಶಗಳ ಧಾರ್ಮಿಕ ದತ್ತಿ ಇನಾಂಗಳನ್ನು ರದ್ದು ಮಾಡುವ ವಿಧೇಯಕವನ್ನು ಚರ್ಚೆಗೆಂದು ಇಂದು ವಿಧಾನಸಭೆಯಲ್ಲಿ ಮಂಡಿಸಿದಾಗ ಕಂದಾಯ ಮಂತ್ರಿ ಶ್ರೀ ಎನ್‌. ಹುಚ್ಚಮಾಸ್ತಿ ಗೌಡ ಅವರು ಈ ವಿಷಯವನ್ನು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.