ADVERTISEMENT

ವಾಚಕರ ವಾಣಿ: ಆ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನೋಡುವರೇ?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 23:15 IST
Last Updated 20 ಅಕ್ಟೋಬರ್ 2022, 23:15 IST

ಸಹಶಿಕ್ಷಕರ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 38 ಸಹ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವ ಸುದ್ದಿ (ಪ್ರ.ವಾ., ಅ. 20) ಓದಿ ವಿಷಾದವೆನಿಸಿತು. ಹೇಳಿಕೇಳಿ ಶಿಕ್ಷಕ ಹುದ್ದೆ. ಅದರಲ್ಕೂ ಅಕ್ರಮವೆಸಗಿ ಮೇಷ್ಟ್ರು, ಮೇಡಮ್ಮು ಆಗಿ ಒಂದು ಸಮಾಜ ಕಟ್ಟುತ್ತೇವೆಂದು ಹೊರಡುವ ಇಂತಹ ಶಿಕ್ಷಕರಿಂದ ಸಮಾಜ ಏನು ನಿರೀಕ್ಷೆ ಮಾಡಲು ಸಾಧ್ಯ?

ಕೆಲವು ಶಿಕ್ಷಕರು ತಮ್ಮ ದುಡಿಮೆಯ ಹಣದಲ್ಲಿ ಒಂದಿಷ್ಟು ಭಾಗವನ್ನು ಶಾಲೆಯ ಅಭಿವೃದ್ಧಿಗೆ ಹಾಕಿ, ವಿದ್ಯಾರ್ಥಿಗಳ ಒಳಿತಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಅಕ್ರಮದ ದಾರಿಯಿಂದ ಬಂದ ವ್ಯಕ್ತಿಗಳಿಂದ ಅಕ್ಷರ ಕಲಿತ ಮಕ್ಕಳು ಸಾಧಿಸುವುದಾದರೂ ಏನು? ಕಾಯಾ ವಾಚಾ ಮನಸಾ ಕಲಿಸಿದಾಗ, ತೊಡಗಿಸಿಕೊಂಡಾಗ ಕಿಂಚಿತ್ ಕಲಿಕೆ ಸಾಧ್ಯ. ಬಂಧನಕ್ಕೆ ಒಳಗಾಗಿರುವ ಶಿಕ್ಷಕರು ಮಕ್ಕಳ ದೃಷ್ಟಿಯಲ್ಲಿ ಏನಾಗುತ್ತಾರೆ? ಆ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಇವರಿಗೆ ಇದೆಯೇ?

ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.