ADVERTISEMENT

ಪ್ರಜಾವಾಣಿ@75 | ಪ್ರಜಾಪ್ರಭುತ್ವದ ನಿಲುವಿಗೆ ಪ್ರಜಾವಾಣಿ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:17 IST
Last Updated 19 ನವೆಂಬರ್ 2022, 10:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪ್ರಜಾಪ್ರಭುತ್ವದ ನಿಲುವಿಗೆ ಪ್ರಜಾವಾಣಿ ಕೊಡುಗೆ ಅಪಾರ

1961 ರಲ್ಲಿಯ ನನ್ನ ಹೈಸ್ಕೂಲ ದಿನಗಳಿಂದ ಇಲ್ಲಿಯವರೆಗೆ ‘ಪ್ರಜಾವಾಣಿ’ ನಿತ್ಯ ಒಡನಾಡಿ. ವಸ್ತುನಿಷ್ಠ ಮಾಹಿತಿಗೆ,
ಪ್ರಜಾಪ್ರಭುತ್ವದ ನಿಲುವಿಗೆ, ಪ್ರಜಾವಾಣಿ ಕೊಡುಗೆ ಅಪಾರ. ಸಾಪ್ತಾಹಿಕ ಪುರವಣಿ, ದೀಪಾವಳಿ ಸಂಚಿಕೆಗಳು ಸಾಹಿತ್ಯ
ಸಂಸ್ಕೃತಿಯ ಸಂಗಮ. ನಿತ್ಯದ ಸಂಪಾದಕೀಯ ಪುಟ ವೈಚಾರಿಕ ಪ್ರಜ್ಞೆಯ ವೃದ್ಧಿಗೆ ಸಹಕಾರಿ. 74 ವರ್ಷ ನಾಡಿನ ಓದುಗರ
ಪ್ರಜ್ಞೆಯನ್ನು ಹೆಚ್ಚಿಸುತ್ತ ಬಂದಿರುವ ಪತ್ರಿಕೆ.

ನನ್ನ ಬರವಣಿಗೆಗೆ ಸ್ಪೂರ್ತಿಯ ಸೆಲೆಯಾಗಿದೆ. ಇನ್ನೂ ನೂರಾರು ವರ್ಷ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮುನ್ನಡೆಯಲಿ
ಎಂದು ಅಮೃತ ವರ್ಷದಲ್ಲಿ ಹಾರೈಸುವೆನು.

ADVERTISEMENT

ಯು.ಎನ್.ಸಂಗನಾಳಮಠ. ಹೊನ್ನಾಳಿ, ದಾವಣಗೆರೆ

***

ಕರುನಾಡನ್ನು ಬೆಳಗಿಸಿದ ಕೀರ್ತಿ

ಅಮೃತ ಮಹೋತ್ಸವದ ಘಳಿಗೆಯ ಮೆರಗು ಓದುಗರ ವಿಶ್ವಾಸರ್ಹ ಪ್ರಜಾ ಸಾಕ್ಷಿ ಪ್ರಜಾವಾಣಿ ದೈನಿಕ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮರು ವರ್ಷವೇಅಕ್ಟೋಬರ್ 15ರಂದು ಪ್ರಜಾ ಸ್ವಾಯತ್ತತೆ ಕಾಪಾಡಲು ವಿಭಿನ್ನ ದೃಷ್ಟಿಕೋನ ಇಟ್ಟುಕೊಂಡು ಪ್ರಾರಂಭಿಸಿದ ಪ್ರಜಾವಾಣಿ ದಿನ ಪತ್ರಿಕೆಯು ಸದ್ಯ ಅಮೃತ ಮಹೋತ್ಸವದ ಸಂಭ್ರಮದ ಅಮೃತ ಘಳಿಗೆಯಲ್ಲಿರುವ ಸಂಗತಿ ಇಡೀ ನಾಡಿಗೆ ನಾಡೇ ಕುಣಿದಾಡುವಂತದ್ದು.

ಸಮಾಜವನ್ನು ಮಾಧ್ಯಮ ಕ್ಷೇತ್ರದ ಮೂಲಕ ಸರಿ ದಾರಿಗೆ ತಂದು ಆ ದಿಸೆಯಲ್ಲಿ ಅಭಿವೃದ್ದಿ ಪಥದತ್ತ ಸಾಗಲು ತಮ್ಮ
ಕನಸನ್ನು ನನಸಾಗಿಸಲು ಗುರುಸ್ವಾಮಿ ಆರಂಭಿಸಿದ ಅತ್ಯಂತ ವಿಶ್ವಾಸರ‍್ಹ ದೈನಿಕವು ಹಲವು ಏಳು- ಬೀಳುಗಳನ್ನು ದಾಟಿ ನೇರ
ನಿಷ್ಠುರತೆಯಿಂದ ಕರುನಾಡನ್ನು ಬೆಳಗಿಸಿದ ಕೀರ್ತಿಪ್ರಜಾವಾಣಿಗೆ ಸಲ್ಲುತ್ತದೆ.

ಕನ್ನಡ ನಾಡಿನಲ್ಲಿ ಯಾವುದೇ ಜ್ವಲಂತ ಸಮಸ್ಯಗಳು ಎದುರಾದಾಗ ಅದನ್ನು ಅಕ್ಷರಗಳ ಮೂಲಕ ಜವಾಬ್ದಾರಿಯುತವಾಗಿ
ಸ್ಪಂದಿಸಿ ನ್ಯಾಯ ದೊರೆಯುವಲ್ಲಿಯೂ ತನ್ನ ಆಸ್ಮಿತೆಯನ್ನುತೋರಿಸಿ ಓದುಗರೇ ಒಡೆಯರು ಎನ್ನುವ ತತ್ವದಡಿಯಲ್ಲಿ ಸಾಗಿ ಜನ ಮಾನಸದಲ್ಲಿ ಅಜರಾಮರವಾಗಿ ಆನೆ ನಡೆದಿದ್ದೇ ದಾರಿ ಎಂಬಂತೆ ನಡೆಯುತ್ತಿದೆ.

ಮಹಾಂತೇಶ ರಾಜಗೋಳಿ,ಬೈಲಹೊಂಗಲ,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.