ಹರಿಹರದ ಯೋಧ ಜಾವಿದ್ ವೀರಮರಣವನ್ನಪ್ಪಿ ಎರಡು ವರ್ಷಗಳಾದರೂ ಮೃತ ಯೋಧನ ಪತ್ನಿ ಇನ್ನೂ ಕೆಲಸಕ್ಕಾಗಿ ಅಲೆದಾಡುತ್ತಿರುವುದನ್ನು ಕೇಳಿ ಬೇಸರವಾಯಿತು. ಒಬ್ಬ ಯೋಧ ಹುತಾತ್ಮನಾದ ಸಂದರ್ಭದಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳೂ ಸ್ಪರ್ಧೆಗಿಳಿದಂತೆ ತಂಡೋಪತಂಡವಾಗಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ಈ ನೆಪದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ರಾಜಕಾರಣಿಗಳು, ಮೊದಲು ಇಂತಹವರ ನೆರವಿಗೆ ಧಾವಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕಾಗಿದೆ. ಅದೇ ನಾವು ಯೋಧರಿಗೆ ಕೊಡುವ ನಿಜವಾದ ಗೌರವ.
ಮುರುಗೇಶ ಡಿ., ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.