ADVERTISEMENT

ಅರ್ಜಿ ಆಹ್ವಾನಿಸುವ ಔಚಿತ್ಯವೇನು?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 19:30 IST
Last Updated 1 ನವೆಂಬರ್ 2020, 19:30 IST

ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸದಿರುವ ಸಾಧಕರನ್ನೂ ಪರಿಗಣಿಸಲಾಗಿದೆ ಎಂಬ ಸುದ್ದಿ (ಪ್ರ.ವಾ., ಅ. 29) ಸೋಜಿಗದ ಸಂಗತಿ! ಹಾಗಾದರೆ ಅರ್ಜಿಗಳನ್ನು ಆಹ್ವಾನಿಸುವ ಔಚಿತ್ಯವೇನು? ಅಷ್ಟಕ್ಕೂ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಿ ನಂತರ ಬಹುತೇಕ ಅರ್ಜಿಗಳನ್ನು ತಿರಸ್ಕಾರ ಮಾಡುವಂಥದ್ದು ಶ್ರಮ ಮತ್ತು ಅನಗತ್ಯ ಹೊರೆಯಲ್ಲವೇ? ಎಲೆಮರೆ ಕಾಯಿಯಂತೆ ನಾಡಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಲು ಸಾಧ್ಯ ವಾಗಿರುವುದಾದರೆ, ಇನ್ನು ಮುಂದೆ ಅರ್ಜಿ ಸ್ವೀಕರಿಸದೇ ಸಾಧಕರನ್ನು ಗುರುತಿಸುವುದು ಹೆಚ್ಚು ಪ್ರಯೋಜಕ. ಇದರಿಂದ ಸಾಧಕರು ಮತ್ತು ಆಯ್ಕೆ ಸಮಿತಿ ಬಗ್ಗೆ ಸಾರ್ವಜನಿಕ ಪ್ರಶಂಸೆ ದೊರೆಯುತ್ತದೆ ಜೊತೆಗೆ ಪ್ರಶಸ್ತಿಯ ಮೌಲ್ಯ ಕೂಡ ಹೆಚ್ಚಾಗುತ್ತದೆ.

ಆಯ್ಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಅನಿವಾರ್ಯವನ್ನು ಸರಿದೂಗಿಸಲು, ನೇರ ಅರ್ಜಿ ಸಲ್ಲಿಸುವ ಬದಲಾಗಿ ಅರ್ಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಸಾಧಕರ ಕ್ಷೇತ್ರದ ಬಗ್ಗೆ ಪರಿಚಯವಿರುವ ಯಾವುದೇ ನಾಗರಿಕರು ‘ನಾಮಿನೇಟ್’ ಮಾಡುವುದು ಒಳ್ಳೆಯದು. ಮಿಗಿಲಾಗಿ, ಸಾಧಕರ ಸಾಧನೆಗಳ ಪರಿಚಯವನ್ನು ಪುಸ್ತಕ ಅಥವಾ ಕನ್ನಡ ದಿನಪತ್ರಿಕೆಗಳಲ್ಲಿ ವಿಶೇಷ ಸಂಚಿಕೆ ರೂಪದಲ್ಲಿ ತರುವ ಆಲೋಚನೆಯನ್ನೂ ಮಾಡಬಹುದು.

- ಜಿ.ಬೈರೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.