ADVERTISEMENT

ಕಸಾಪ: ಹಂಗಿಗೆ ಒಳಗಾಗುವುದು ಬೇಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 15:14 IST
Last Updated 16 ನವೆಂಬರ್ 2021, 15:14 IST

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ರಾಜಕೀಯೇತರವಾಗಿರಲಿ ಎಂಬುದು ಪರಿಷತ್ತನ್ನು ಕಟ್ಟಿದವರ ಆಶಯ. ಇಂದು ಪರಿಷತ್ತಿನ ಸದಸ್ಯರನ್ನು ಓಲೈಸಲು ರಾಜಕಿಯ ಪಕ್ಷದವರನ್ನು ಸೇರಿಸಿಕೊಳ್ಳುವ ದುರಂತ ವ್ಯವಸ್ಥೆ ನಿರ್ಮಾಣವಾಗಿದೆ. ಮತ್ತೊಂದು ಕಡೆ, ಮತ ಚಲಾಯಿಸುವ ದಿನದಂದು, ಕ್ರಮಸಂಖ್ಯೆ ನೀಡುವ ನೆಪದಲ್ಲಿ ಶಾಮಿಯಾನ ಹಾಕಿ ಊಟ, ತಿಂಡಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸದಸ್ಯರಿಗೆ ಯಾವ ಶಾಮಿಯಾನದ ಬಳಿ ಹೋದರೂ ಮತ್ತೊಬ್ಬನಿಗೆ ನಿಷ್ಠುರ, ಮತ ಹಾಕಿ ಬಂದ ಮೇಲೆ ಮುಜುಗರ, ದ್ವೇಷವೂ ಬೆಳೆದು
ಬಿಡುತ್ತದೆ.

ಪ್ರಬುದ್ಧರ ಪರಿಷತ್ ಪ್ರಬುದ್ಧವಾಗಿಯೇ ಇರಲಿ. ಕಾಲ ಬದಲಾಗಿದೆ. ಮೊಬೈಲ್‌ನಲ್ಲಿ ಕ್ರಮಸಂಖ್ಯೆ ಕಳುಹಿಸಿದರೆ ಸಾಕು, ಗುರುತಿನ ಚೀಟಿಯೊಂದಿಗೆ‌ ಗುಪ್ತ ಮತದಾನ ಮಾಡಬಹುದು. ಹಾಗಾಗಿ ದಯಮಾಡಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಪ್ರಸ್ತುತ ಕೋವಿಡ್ ನಿಯಮವನ್ನು ಪಾಲಿಸಬೇಕಾಗಿರುವುದರಿಂದ ಶಾಮಿಯಾನ ಹಾಕಿ ಮತ್ತೊಬ್ಬನ ಕೈಯಿಂದ ಚೀಟಿ, ಊಟ, ತಿಂಡಿ, ಕೊಡುವ ವ್ಯವಸ್ಥೆಯನ್ನು ರದ್ದುಪಡಿಸಬೇಕು.

-ಜಿ.ಪಳನಿಸ್ವಾಮಿ ಜಾಗೇರಿ,ಕೊಳ್ಳೇಗಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.