ADVERTISEMENT

ವಾಚಕರ ವಾಣಿ | ಪ್ರಾಣಿಗಳಿಲ್ಲದ ಸರ್ಕಸ್‌...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಜೂನ್ 2022, 19:45 IST
Last Updated 17 ಜೂನ್ 2022, 19:45 IST

ದಾವಣಗೆರೆಯಲ್ಲಿ ಆಯೋಜಿಸಿದ್ದ ಸರ್ಕಸ್ ಪ್ರದರ್ಶನ ನೋಡಲೆಂದು ಇತ್ತೀಚೆಗೆ ಕುಟುಂಬಸಮೇತ ಹೋಗಿದ್ದೆವು. ಅಲ್ಲಿ ನಡೆಸಿಕೊಡುತ್ತಿದ್ದ ಪ್ರತಿಯೊಬ್ಬರ ಪ್ರದರ್ಶನವೂ ಮೈ ಜುಂ ಎನಿಸುವಂತಿತ್ತು. ನಾನು ಕೊನೆಯದಾಗಿ ಸರ್ಕಸ್ ನೋಡಿದ್ದೇ ಪ್ರಾಥಮಿಕ ಶಾಲೆಯಲ್ಲಿದ್ದಾಗ. ಅಂದಿನ ಕಾಲದ ಸರ್ಕಸ್‌ಗೂ ಇಂದಿನ ಕಾಲಕ್ಕೂ ಅಜಗಜಾಂತರ ಇದೆ. ಸರ್ಕಸ್‌ನ ಪ್ರಮುಖ ಆಕರ್ಷಣೆಯೆಂದರೆ ಪ್ರಾಣಿಗಳು. ಪ್ರಾಣಿಗಳನ್ನು ನೋಡಲೆಂದೇ ಸರ್ಕಸ್ ನೋಡಲು ಹೆಚ್ಚು ಜನ ಮುಗಿಬೀಳುತ್ತಿದ್ದರು. ಅದರಲ್ಲೂ ಮಕ್ಕಳಿಗಂತೂ ಇನ್ನೂ ಅಚ್ಚುಮೆಚ್ಚು.

ಸರ್ಕಸ್ ಕಂಪನಿಗಳಲ್ಲಿ ಪ್ರಾಣಿಗಳ ಪ್ರದರ್ಶನವನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದರಿಂದ, ಇತ್ತೀಚಿನ ಸರ್ಕಸ್ ಪ್ರದರ್ಶನಗಳು ಮನುಷ್ಯರು ನಡೆಸಿಕೊಡುವ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ. ಇದರಿಂದಾಗಿ ಸರ್ಕಸ್ ತುಂಬಾ ನೀರಸ ಎನಿಸಿತು. ಹಿಂದಿನ ಕಾಲದ ಸಂಗತಿಗಳನ್ನು ನೆನಪಿಸಿಕೊಂಡರೆ ನಮ್ಮ ಬಾಲ್ಯದ ದಿನಗಳು ನಿಜಕ್ಕೂ ಅವಿಸ್ಮರಣೀಯ. ಈಗಿನ ಮಕ್ಕಳ ಮೊಬೈಲ್, ಕಂಪ್ಯೂಟರ್‌ಗಳ ಮುಂದೆ, ನಮ್ಮ ಅಂದಿನ ಬಾಲ್ಯದ ದಿನಗಳಿಗೆ ಬೆಲೆ ಕಟ್ಟಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT