ADVERTISEMENT

ಯಾರನ್ನು ದೂರುವುದು?

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:15 IST
Last Updated 7 ಮೇ 2020, 20:15 IST

ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಶೆಯಲ್ಲಿದ್ದ ಯುವಕನೊಬ್ಬ ಹಾವನ್ನೇ ಕಚ್ಚಿ ಕೊಂದು ಹಾಕಿರುವ ಸುದ್ದಿ (ಪ್ರ.ವಾ., ಮೇ 6) ಆಘಾತಕಾರಿ.

ಲಾಕ್‌ಡೌನ್ ನಂತರ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಮದ್ಯದ ಪರಿಣಾಮದಿಂದ ಕೊಲೆ, ಸುಲಿಗೆ, ಹಿಂಸಾ ಚಟುವಟಿಕೆಗಳಲ್ಲಿ ದಿಢೀರ್ ಏರಿಕೆಯಾಗಿದೆ. ಕುಡುಕರ ಸಾಕಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗ್ರಾಮಸ್ಥರು ಆ ಹಾವನ್ನು ಕಾಪಾಡಲು ಯತ್ನಿಸದೆ ವಿಡಿಯೊ ಮಾಡುತ್ತ ನಿಂತಿದ್ದುದು ವಿಕೃತ ಮನಃಸ್ಥಿತಿಯ ದ್ಯೋತಕ. ಈ ಘಟನೆಯಲ್ಲಿ ಯಾರನ್ನು ದೂಷಿಸಬೇಕು? ಹಾವನ್ನು ಕಚ್ಚಿದ ವ್ಯಕ್ತಿಯನ್ನೇ? ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರವನ್ನೇ? ಮೂಕಪ್ರೇಕ್ಷಕರಂತೆ ನಿಂತ ಗ್ರಾಮಸ್ಥರನ್ನೇ?

ADVERTISEMENT

-ಸುಘೋಷ ಎಸ್. ನಿಗಳೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.