ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST

ದೇವಾಲಯಗಳು ಹಾಗೂ ಹೋಟೆಲ್‌ಗಳನ್ನು ತೆರೆಯಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇನ್ನೂ ಅನುಮತಿ ನೀಡಿಲ್ಲದಿರುವುದು ಸರಿಯಲ್ಲ. ದೇವಾಲಯಗಳ ಪ್ರವೇಶಕ್ಕೆ ವಿಧಿಸಲಾಗಿರುವ ಷರತ್ತುಗಳನ್ನೇ ಅನ್ವಯಿಸಿ ರಂಗಮಂದಿರಗಳ ಕಾರ್ಯಾರಂಭಕ್ಕೆ ಅನುಮತಿ ನೀಡಬೇಕು.

ಉದಾಹರಣೆಗೆ, ಕಾರ್ಯಕ್ರಮ ಆಯೋಜಕರು 50 ಭಾಗದಷ್ಟು ಆಸನ ವ್ಯವಸ್ಥೆಗೆ ಮಾತ್ರ ವೀಕ್ಷಕರನ್ನು ಆಮಂತ್ರಿಸಬಹುದು, ಆಮಂತ್ರಣ ಇಲ್ಲದೇ ಬರುವವರನ್ನು ವಾಪಸ್ ಕಳುಹಿಸುವುದು, ಆಮಂತ್ರಣದ ಮೇಲಿರುವ ನಂಬರಿನ ಆಸನದಲ್ಲೇ ಕಡ್ಡಾಯವಾಗಿ ಕುಳಿತುಕೊಳ್ಳಬೇಕು ಎಂಬಂತಹ ಷರತ್ತುಗಳನ್ನು ವಿಧಿಸಬಹುದು. ಅದರ ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳುವ ಸಂಘಟಕರನ್ನು ಪರಿಗಣಿಸಬೇಕು.

ಯಾವುದೇ ಸಂಕಷ್ಟಕ್ಕೆ, ವಿಷಮ ಕಾಯಿಲೆಗೆ ಮಾನಸಿಕ ಖಿನ್ನತೆ ಮತ್ತು ಒತ್ತಡವೇ ಕಾರಣ. ಇವುಗಳಿಂದ ಹೊರಬರಲು ಸಾಧ್ಯವಾದರೆ ಕೊರೊನಾ ಆತಂಕದಿಂದಲೂ ಹೊರಬರಬಹುದು. ಈ ದಿಸೆಯಲ್ಲಿ ನಮ್ಮ ಕಲಾ ಪ್ರಕಾರಗಳು ಸಹಾಯ ಮಾಡುತ್ತವೆ.

ADVERTISEMENT

-ಎ.ವಿ.ಸತ್ಯನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.