ADVERTISEMENT

ಅರ್ಥಹೀನ ಹೇಳಿಕೆ ವಾಪಸ್‌ ಪಡೆಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಅಕ್ಟೋಬರ್ 2021, 19:58 IST
Last Updated 10 ಅಕ್ಟೋಬರ್ 2021, 19:58 IST

‘ಶಾಲಾ ಪಠ್ಯಪುಸ್ತಕಗಳಲ್ಲಿರುವ ದೋಷ’ಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಪ್ರಚೋದನ ಕಾರಿ ಹೇಳಿಕೆ ತುಂಬ ಆಘಾತಕಾರಿಯಾದುದು ಹಾಗೂ ಖಂಡನೀಯವಾದುದು. ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈಬಿಡಬೇಕು ಎಂಬ ಒತ್ತಾಯಕ್ಕೆ ಸೂಕ್ತವಾದ ರೀತಿಯಲ್ಲಿ ಸಮಜಾಯಿಷಿಯನ್ನು ನೀಡದೆ ಈ ರೀತಿ ಪ್ರತಿಕ್ರಿಯಿಸಿರುವುದನ್ನು ಗಮನಿಸಿದರೆ ಅವರ ಮನದಿಂಗಿತದ ಬಗ್ಗೆ ಯಾರಿಗೇ ಆಗಲಿ ಗುಮಾನಿ ಬರದೇ ಇರದು. ಅವರು ಮಾಡಿರುವ ಆರೋಪಗಳು ನಿರಾಧಾರ ಹಾಗೂ ಅರ್ಥಹೀನ. ಬರಗೂರು ರಾಮಚಂದ್ರಪ್ಪ ಅವರಂತಹವರ ಘನತೆಯನ್ನು ಅರಿಯದೆ ಮಾತನಾಡಿರುವುದು ಅಕ್ಷಮ್ಯ. ಸಚಿವರು ಒಂದೇ ಒಂದು ಬಾರಿ ಬರಗೂರರೊಡನೆ ಸಂವಾದ ನಡೆಸಿದ್ದರೂ ಅವರಿಂದ ಇಂತಹ ಅಚಾ ತುರ್ಯ ನಡೆಯುತ್ತಿರಲಿಲ್ಲ ಎಂಬುದು ನನ್ನ ಆಧಾರಸಹಿತ ನಂಬುಗೆ. ಈಗಲಾದರೂ ಸಚಿವರು ಬರಗೂರರೊಡನೆ ಮಾತನಾಡಲಿ ಮತ್ತು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿ.

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT