ADVERTISEMENT

ತಾರತಮ್ಯ ಸೂಚಕ ಎಲ್ಲ ಪದಗಳನ್ನೂ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 19:23 IST
Last Updated 8 ಜೂನ್ 2020, 19:23 IST

ಶತಮಾನಗಳಿಂದ ಪ್ರಚಲಿತದಲ್ಲಿರುವ ‘ದಲಿತ’ ಎಂಬ ಪದವನ್ನು ಆಡಳಿತ ವ್ಯವಹಾರದಲ್ಲಿ ಬಳಸುವಂತಿಲ್ಲ ಎಂದು ಸರ್ಕಾರ ನಿರ್ದೇಶಿಸಿರುವುದು ಸ್ವಾಗತಾರ್ಹ. ಆದರೆ, ಇದೇ ರೀತಿ ಅನೇಕ ಪದಗಳು ತಾರತಮ್ಯ ತೋರುವಂತಿವೆ.

ಉದಾಹರಣೆಗೆ, ‘ಕನ್ನಡ ರತ್ನಕೋಶ’ ಸಂಕ್ಷಿಪ್ತ ನಿಘಂಟು ಏಳನೆಯ ಪರಿಷ್ಕೃತ ಮುದ್ರಣವನ್ನು 2010ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಅದರಲ್ಲಿ ‘ಹೊಲೆಯ’ ಎಂಬ ಪದಕ್ಕೆ ಸಮಾನಾರ್ಥವಾಗಿ ‘ದುಷ್ಟ’ ಎಂದು ಬಳಸಲಾಗಿದೆ. ಅದೇ ರೀತಿ, ‘ಮಾದಿಗ’ ಸಮಾನಾರ್ಥ ಪದವನ್ನು ಪರಿಶಿಷ್ಟ ವರ್ಗದಲ್ಲಿ ಒಂದು ಪಂಗಡ ಎಂದು ತಿಳಿಸಲಾಗಿದೆ.

ಹೊಲೆಯ ಪದಕ್ಕೂ ಇದೇ ರೀತಿ ಬಳಸುವುದು ಬಿಟ್ಟು ದುಷ್ಟ, ನೀಚ ಎಂಬ ಅರ್ಥಗಳನ್ನು ನೀಡಿರುವುದು ಸರಿಯೇ? ಇಂತಹ ತಾರತಮ್ಯ ಸೂಚಕ ಪದಗಳನ್ನೂ ಕೈಬಿಡುವಂತೆ ಸರ್ಕಾರ ಸೂಚಿಸಲಿ.

ADVERTISEMENT

-ಭೀಮಾಶಂಕರ ಹಳಿಸಗರ,ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.