ADVERTISEMENT

ಧರ್ಮಗ್ರಂಥಗಳ ಸಾರ ಅರಿಯೋಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಅಕ್ಟೋಬರ್ 2020, 19:31 IST
Last Updated 13 ಅಕ್ಟೋಬರ್ 2020, 19:31 IST

ಬಹುಧರ್ಮೀಯರು ವಾಸಿಸುವ ಭಾರತದಲ್ಲಿ ಎಲ್ಲರೂ ಕೂಡಿ ಬಾಳಿದರೆ ಅದು ಸ್ವತಃ ನಮಗೂ ಹಾಗೂ ದೇಶಕ್ಕೂ ಬಹಳ ದೊಡ್ಡ ಅನುಗ್ರಹವೆಂದೇ ಹೇಳಬಹುದು. ಆದ್ದರಿಂದ ಪರಸ್ಪರ ಅರಿತು ಬಾಳುವಂತಹ ವಾತಾವರಣವನ್ನು ನಿರ್ಮಿಸಬೇಕಾದ ಹೊಣೆ ಸರ್ಕಾರದ ಜೊತೆಗೆ ಜನಸಾಮಾನ್ಯರಾದ ನಮ್ಮ ಮೇಲೂ ಇದೆ. ಇದಕ್ಕಾಗಿ ಎಲ್ಲಾ ಧರ್ಮದ ಧಾರ್ಮಿಕ ಗ್ರಂಥಗಳ ಮುಕ್ತ ಕೊಡುಕೊಳ್ಳುವಿಕೆಯ ಅನೌಪಚಾರಿಕ ಕೆಲಸ ಇಲ್ಲಿ ನಡೆಯಬೇಕಾಗಿದೆ.

ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವ ಪಾಠ ಕಲಿಸುವುದಿಲ್ಲ ಎಂದೇ ಎಲ್ಲರೂ ಹೇಳುತ್ತೇವೆ. ಹಾಗಾದರೆ ಇಂತಹ ಧರ್ಮಗಳನ್ನು ಪರಸ್ಪರ ತಿಳಿಯಬೇಡವೇ? ಈ ದಿಸೆಯಲ್ಲಿ ಪರಸ್ಪರ ಅರಿಯುವಂತಹ ಧಾರ್ಮಿಕ ಸಭೆಗಳನ್ನು ಆಗಾಗ ನಾವು ಸಂದರ್ಭಾನುಸಾರ ಹಮ್ಮಿಕೊಳ್ಳಬೇಕು ಮತ್ತು ಆ ಸಭೆಯಲ್ಲಿ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಆಹ್ವಾನಿಸಿ, ಅವರಿಗೆ ತಮ್ಮ ಸಂದೇಶಗಳನ್ನು ಮುಕ್ತವಾಗಿ ಸಭಿಕರೊಂದಿಗೆ ಹಂಚಿಕೊಳ್ಳುವ ಅವಕಾಶವಿರ
ಬೇಕು. ಇಲ್ಲಿ ಯಾವುದೇ ಅನಗತ್ಯ ಮಾತುಗಳು ಬಾರದ ಹಾಗೆ ನೋಡಿಕೊಂಡು ಆರೋಗ್ಯಪೂರ್ಣ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಟೀಕೆ, ಆರೋಪ ಹಾಗೂ ಜಗಳಕ್ಕೆ ಆಸ್ಪದ ಇರಬಾರದು. ಇಂತಹ ಸಮಾಜವನ್ನು ಕಟ್ಟಿದರೆ ಖಂಡಿತವಾಗಿಯೂ ಮುಂದಿನ ನಮ್ಮ ಪೀಳಿಗೆಗಳು ಸಂತೋಷ ಹಾಗೂ ಆನಂದದಿಂದ ಬಾಳಬಹುದು.

- ರಿಯಾಝ್ ಅಹ್ಮದ್, ರೋಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.