ADVERTISEMENT

ವಾಚಕರ ವಾಣಿ: ಪೈಪ್ ಬೆಲೆಗಿರಲಿ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 18:31 IST
Last Updated 29 ನವೆಂಬರ್ 2020, 18:31 IST

ಕೊರೊನಾ ಲಾಕ್‌ಡೌನ್ ನಂತರದ ದಿನಗಳಿಂದ ಕೃಷಿ ಬಳಕೆಯ ಪೈಪಿನ‌ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡಲಾಗುತ್ತಿದೆ ಅನಿಸುತ್ತಿದೆ. ಇದರಿಂದ ರೈತರಿಗೆ ಬಿಸಿ ಮುಟ್ಟಿದೆ. ಎರಡು ಇಂಚಿನ, ಗುಣಮಟ್ಟ ಹೊಂದಿರುವ ಬ್ರ್ಯಾಂಡಿನ 20 ಅಡಿಗಳುಳ್ಳ ಪಿವಿಸಿ ಪೈಪುಗಳ ಬೆಲೆ ಮಾರ್ಚ್‌ನಲ್ಲಿ ₹ 330ರ ಆಸುಪಾಸಿನಲ್ಲಿತ್ತು, ಇಂದು ₹ 410 ತಲುಪಿದೆ. ₹ 70ಕ್ಕೆ ಸಿಗುತ್ತಿದ್ದ ಅರ್ಧ ಇಂಚು ಪೈಪಿನ ಬೆಲೆ ಈಗ ₹ 100 ದಾಟಿದೆ. ಎರಡೂವರೆ ಇಂಚು ಪೈಪಿನ ಬೆಲೆ ₹ 500 ದಾಟಿದೆ.

ಮಳೆಗಾಲ ಮುಗಿದು ರೈತರಿಗೆ ಈಗ ಪೈಪುಗಳ ಅಗತ್ಯ ಇದೆ. ಹನಿ ನೀರಾವರಿ ಅಳವಡಿಕೆಗಂತೂ ಪೈಪುಗಳ ಬಳಕೆ ಅತ್ಯಗತ್ಯ. ಪಿವಿಸಿ ಪೈಪುಗಳ ತಯಾರಿಕೆಗೆ ಬಳಸುವ ಪಾಲಿ ವಿನೈಲ್ ಕ್ಲೋರೈಡ್ ಅಭಾವದಿಂದ ಪೈಪುಗಳ ಬೆಲೆ
ಏರಿಕೆಯಾಗಿದೆಯೆಂದು ಪೈಪುಗಳ ತಯಾರಿಕೆ ಕ್ಷೇತ್ರದಲ್ಲಿರುವವರು ಹೇಳುತ್ತಿದ್ದಾರೆ. ಈ ಪೌಡರ್‌ನ ಕೃತಕ ಅಭಾವವೇ ಇಂತಹ ಬೆಲೆ ಏರಿಕೆಗೆ ಕಾರಣವೆಂತಲೂ ಹೇಳಲಾಗುತ್ತಿದೆ. ಸರ್ಕಾರ ಇತ್ತ ಗಮನಹರಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಿ ರೈತರ ಹಿತ ಕಾಪಾಡಬೇಕು.

-ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.