ADVERTISEMENT

ಸಂಸ್ಕೃತಿಗೆ ಆದ್ಯತೆಯಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಡಿಸೆಂಬರ್ 2020, 19:31 IST
Last Updated 8 ಡಿಸೆಂಬರ್ 2020, 19:31 IST

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಅಧಿಕಾರಿಗಳು ಕುಳಿತುಕೊಂಡೇ ನಾಮಪತ್ರ ಸ್ವೀಕರಿಸಬೇಕೆಂಬ ನಿಯಮವಿದೆ. ಪ್ರಧಾನಿ, ಮುಖ್ಯಮಂತ್ರಿಯಂತಹ ದೊಡ್ಡ ದೊಡ್ಡ ಪ್ರತಿನಿಧಿಗಳೇ ಇರಲಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದಲ್ಲಿ ಅದು ಕರ್ತವ್ಯಚ್ಯುತಿ ಆಗುತ್ತದೆ. ಆದರೆ ಹಿರಿಯರು, ಹೋರಾಟಗಾರರು, ರೈತರು ತಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಮನವಿ ಸಲ್ಲಿಸುವಾಗಲೂ ಸಂಬಂಧಪಟ್ಟ ಅಧಿಕಾರಿಗಳು ಕುರ್ಚಿಯ ಮೇಲೆ ಕುಳಿತುಕೊಂಡೇ ಅದನ್ನು ಸ್ವೀಕರಿಸುವ ಫೋಟೊಗಳನ್ನು ಮಾಧ್ಯಮಗಳಲ್ಲಿ ಕಾಣುತ್ತೇವೆ. ಮೇಲಿನ ನಿಯಮ ಇಲ್ಲಿ ಅನ್ವಯವಾಗದಿದ್ದರೂಅಧಿಕಾರಿಗಳ ಇಂತಹ ನಡೆ ಎಷ್ಟು ಸರಿ?

ಒಬ್ಬ ವ್ಯಕ್ತಿ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಕಾರಣಕ್ಕಾಗಿ ಮನವಿ ಸಲ್ಲಿಸಲು ಬಂದಾಗ, ಮೊದಲು ಎದ್ದು ನಿಂತು ಸ್ವೀಕರಿಸುವ ಮನೋಭಾವವನ್ನು ಅಧಿಕಾರಿಗಳು ಹೊಂದಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ. ಸಮಸ್ಯೆ ಬಗೆಹರಿಸುವುದು ನಂತರದ ವಿಚಾರ.

- ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.