ADVERTISEMENT

ಹಾಲು– ಜೇನು ಕುಡಿದಂತಾಯಿತು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಡಿಸೆಂಬರ್ 2020, 18:45 IST
Last Updated 7 ಡಿಸೆಂಬರ್ 2020, 18:45 IST

ಹನುಮ ದೇಗುಲಕ್ಕೆ ಎಚ್‌.ಎಂ.ಜಿ. ಬಾಷಾ ಎಂಬುವರು ಜಾಗ ನೀಡಿರುವ ಸುದ್ದಿ (ಪ್ರ.ವಾ., ಡಿ. 7) ಓದಿ ಹಾಲು– ಜೇನು ಕುಡಿದ ಹಾಗಾಗಿದೆ. ಎಲ್ಲಾ ಕಡೆಯೂ ಇಂತಹ ಸರ್ವ ಧರ್ಮ ಸಮನ್ವಯವನ್ನು ತಣ್ಣಗೆ ಸಾರುವ ಶ್ರೀಸಾಮಾನ್ಯ ನಮ್ಮ ನಡುವೆಯೇ ಇದ್ದಾನೆ. ಮಸೀದಿಗಳಿಗೆ ದಾನ ಮಾಡುವ ಈರಣ್ಣ, ಚರ್ಚ್‌ಗೆ ಕ್ಯಾಂಡಲ್ ಕೊಡಿಸುವ ಸಿದ್ಧಿಖ್‌, ಕಿರಣ್ ಅಷ್ಟು ಸುಲಭವಾಗಿ ಕಾಣುವುದಿಲ್ಲ.

ಜನಸಾಮಾನ್ಯರನ್ನು ಅವರ ಪಾಡಿಗೆ ಬಿಟ್ಟರೆ ಕೋಮುವಾದ, ಜಾತಿಜಗಳ, ವೈಷಮ್ಯ, ಧರ್ಮದ ಏರುಪೇರು ಯಾವುದೂ ಇರುವುದಿಲ್ಲ. ಹಿಡಿ ಅನ್ನ, ಇಷ್ಟು ನೀರು, ನೆಮ್ಮದಿಯ ನಿದ್ದೆಗೆ ಬಡಿದಾಡುವ ಜನರು ದೇವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಟ್ಟೆ ತುಂಬಿದ, ಕೆಲಸವಿಲ್ಲದ, ಒಣ ರಾಜಕೀಯ ಮಾಡುವ, ಕೆದಕಿ ಕಂಡವರ ಬದುಕು ಇಣುಕುವ ಕೆಲವೇ ಮಂದಿಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಬಸವಣ್ಣನ ನಾಡಿದು. ದೇವನೊಬ್ಬ ನಾಮ ಹಲವು ಎಂದು ಬಾಯಲ್ಲಿ ಹೇಳಿದರಾಯಿತೇ? ಆಚರಣೆ ಬೇಡವೇ?

-ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.