ಹಳಿ ತಪ್ಪಿರುವ ಗಂಗಾ ಕಲ್ಯಾಣ ಯೋಜನೆ ಕುರಿತು ಬಂದ ವರದಿ (ಪ್ರ.ವಾ., ಒಳನೋಟ, ಮಾರ್ಚ್ 10) ನಿಜಕ್ಕೂ ಸತ್ಯ. ಅತೀ ಸಣ್ಣ ರೈತರಿಗೆ ಕೃತಕ ನೀರಾವರಿ ಕಲ್ಪಿಸುವ ಸಲುವಾಗಿ ರೂಪಿಸಿರುವ ಈ ಯೋಜನೆಯಿಂದ ರೈತರ ಕಲ್ಯಾಣವಾಗದೆ, ಲಾಬಿ ಮಾಡುವವರ ಕಲ್ಯಾಣ ಆಗುತ್ತಿರುವುದು ದುರಂತ.
ಒಬ್ಬನೇ ಫಲಾನುಭವಿಯನ್ನು ಎರಡು ಬಾರಿ ಆಯ್ಕೆ ಮಾಡಿರುವುದೂ ಉಂಟು. ವಿಫಲವಾದ ಕೊಳವೆಬಾವಿಗಳಿಗೂ ನೀರಿನ ಲಭ್ಯತೆ ಸೃಷ್ಟಿಸಿ ಬಿಲ್ ಮಾಡಿಕೊಂಡು ಮೋಟರ್, ಪೈಪು, ಕೇಬಲ್ ಹಾಗೂ ವಿದ್ಯುತ್ ಪರಿವರ್ತಕ ಮಾರಿ ಕೊಂಡಿರುವ ಉದಾಹರಣೆಗಳೂ ನಮ್ಮಲ್ಲಿವೆ.
ನೀರಿನ ಲಭ್ಯತೆ ಪ್ರಮಾಣಪತ್ರ ಬಂದ ನಂತರ, ಅದಕ್ಕೆ ವಿತರಿಸುವ ಎಲ್ಲಾ ವಸ್ತುಗಳು ಕಳಪೆ ಗುಣಮಟ್ಟದವು. ಯೋಜನೆ ಕುರಿತು ತನಿಖೆ ಮಾಡಿದರೆ ಸತ್ಯಾಂಶ ಹೊರಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.