ADVERTISEMENT

ಕನಿಷ್ಠ ವೇತನವಾದರೂ ಬೇಡವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಅಕ್ಟೋಬರ್ 2021, 19:30 IST
Last Updated 15 ಅಕ್ಟೋಬರ್ 2021, 19:30 IST

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಯಗಳ ಅರ್ಚಕರ ವೇತನ ಹೆಚ್ಚಳ ಮಾಡಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.‌ ಆದರೆ ಅವರು ‘ಸಿ’ ವರ್ಗದದೇವಾಲಯಗಳಲ್ಲಿ‌ ಕೆಲಸ ಮಾಡುತ್ತಿರುವ ಅರ್ಚಕರ ಸ್ಥಿತಿಯನ್ನು ಗಮನಕ್ಕೇ ತೆಗೆದುಕೊಂಡಿಲ್ಲ. ಅವರಲ್ಲಿ ಬಹುತೇಕ ದೇವಾಲಯಗಳ‌ ಅರ್ಚಕರ ವೇತನ ₹ 2, ₹ 3 ಇದೆ. ಇದು ನಾಚಿಕೆಗೇಡಿನ ಸಂಗತಿ. ‌ನಾವು ಆಸ್ತಿಕರೋ ನಾಸ್ತಿಕರೋ ಬೇರೆ ಪ್ರಶ್ನೆ. ಆದರೆ ಈ ದೇವಾಲಯಗಳು‌ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅಲ್ಲಿ‌ ಕೆಲಸ ಮಾಡುವವರಿಗೆ ಮರ್ಯಾದೆ ತರುವ ಒಂದು ಕನಿಷ್ಠ ವೇತನವಾದರೂ ಬೇಡವೇ?

- ಕೆ.ವೆಂಕಟರಾಜು,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT