ADVERTISEMENT

ಕಾಂಗ್ರೆಸ್‌: ಕುಟುಂಬದ ಆಸ್ತಿ ಅಲ್ಲ

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:00 IST
Last Updated 26 ಮೇ 2019, 20:00 IST

ಕಾಂಗ್ರೆಸ್, ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ಪಕ್ಷವಾಗಿ ಉಳಿಯುವುದು ದೇಶದ ಮೊದಲ ಅಗತ್ಯ. ತಾವಾಯಿತು ತಮ್ಮ ರಾಜ್ಯವಾಯಿತು ಎಂದುಕೊಂಡು ಸಂಕುಚಿತ ರಾಜಕಾರಣ ಮಾಡುವ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಅವರಂತಹ ರಾಜ್ಯ ಮಟ್ಟದ ನಾಯಕರು ದೇಶದ ಹಿತಕ್ಕೆ ಎಂದೂ ಪೂರಕವಾಗಲಾರರು. ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮ ಬೆಂಬಲ ಆಧಾರಿತ ರಾಷ್ಟ್ರೀಯ ಪಕ್ಷವನ್ನು ತಮ್ಮ ಇಷ್ಟದಂತೆ ಆಡಿಸುವ ಹುನ್ನಾರ ಇವರದು. ಹೀಗಾಗಿ ಬಿಜೆಪಿಗೆ ಏನಿದ್ದರೂ ಕಾಂಗ್ರೆಸ್ ಮಾತ್ರ ಪರ್ಯಾಯ.

ಕಾಂಗ್ರೆಸ್‌ನ ದೊಡ್ಡ ಸ್ವಾರ್ಥ ಎಂದರೆ ವಂಶಾಡಳಿತ. ಮಗ ಎಷ್ಟು ಅಸಮರ್ಥನಾದರೂ ಅವನೇ ಉತ್ತರಾಧಿಕಾರಿ ಎನ್ನುವುದು ರಾಜವಂಶದ ಆಡಳಿತದ ಪ್ರಮುಖ ದೋಷ. ಕಾಂಗ್ರೆಸ್ ಒಂದು ಕುಟುಂಬದ ಆಸ್ತಿ ಅಲ್ಲ. ಈಗ ಈ ಭ್ರಾಂತಿಯಿಂದ ಹೊರಬಂದು ಅರ್ಹ ವ್ಯಕ್ತಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿ, ಪಕ್ಷ ಬಲಗೊಳ್ಳಬೇಕು. ರಾಹುಲ್ ಗಾಂಧಿ ಸದ್ಯಕ್ಕೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧರಾಗಿ ಪ್ರಜಾಪ್ರಭುತ್ವಕ್ಕೆ ಗೌರವ ತೋರಿಸಿದ್ದಾರೆ. ಈಗ ಪಕ್ಷದ ಹಿರಿಯ ಚಿಂತಕರು ಇದನ್ನು ಒಪ್ಪಬೇಕು. ಸಮರ್ಥ ನಾಯಕತ್ವದಿಂದ ಕಾಂಗ್ರೆಸ್ ಮತ್ತೆ ಮೊದಲಿನಂತೆ ವಿಜೃಂಭಿಸಲು ಸಾಧ್ಯ.

-ಸತ್ಯಬೋಧ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.