ADVERTISEMENT

ಸುಗ್ರೀವಾಜ್ಞೆಯಿಂದ ಮತ್ತೊಂದು ತಪ್ಪು

​ಪ್ರಜಾವಾಣಿ ವಾರ್ತೆ
Published 30 ಮೇ 2019, 19:01 IST
Last Updated 30 ಮೇ 2019, 19:01 IST

ಹೈಕೋರ್ಟ್ ತೀರ್ಪಿನಿಂದ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ 1998ನೇ ಸಾಲಿನ 28 ಗೆಜೆಟೆಡ್ ಅಧಿಕಾರಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ (ಪ್ರ.ವಾ., ಮೇ 28). ಇದುಎಷ್ಟು ಸರಿ? ‘ಅಕ್ರಮ ನೇಮಕಾತಿಗೆ ನೇಮಕಾತಿ ಪ್ರಾಧಿಕಾರದ ನ್ಯೂನತೆ ಕಾರಣವೇ ಹೊರತು ಯಾವುದೇ ಅಭ್ಯರ್ಥಿ ವೈಯಕ್ತಿಕವಾಗಿ ಅಕ್ರಮ ಎಸಗಿರುವುದು ಸಾಬೀತಾಗಿಲ್ಲ’ ಎಂದು ಸರ್ಕಾರ ಸಮರ್ಥನೆ ನೀಡಿದೆ. ಪ್ರಾಧಿಕಾರದ ನ್ಯೂನತೆ ಬಳಸಿಕೊಂಡು ಉದ್ಯೋಗ ಗಿಟ್ಟಿಸಿಕೊಂಡಿದ್ದರು ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.

ಸರ್ಕಾರದ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುವ ಪ್ರಾಧಿಕಾರದ ನ್ಯೂನತೆಗೆ ಮತ್ತೆ ಅದೇ ಸರ್ಕಾರ ಕಾರಣ. ಆದರೆ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಮತ್ತೊಂದು ತಪ್ಪನ್ನು ಎಸಗಲು ಹೊರಡುತ್ತಿದೆ. ಇಂತಹ ವಿಷಯಗಳಿಗೆ ತೋರುವ ಉತ್ಸುಕತೆಯನ್ನು, ಪ್ರಾಧಿಕಾರದಲ್ಲಿ ನಾಲ್ಕಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೇಮಕಾತಿಯನ್ನು ಪೂರ್ಣಗೊಳಿಸಿ ಯುವಜನರಿಗೆ ಉದ್ಯೋಗ ಒದಗಿಸಲು ಸರ್ಕಾರ ತೋರದೇ ಇರುವುದುವಿಷಾದಕರ.

-ದರ್ಶನ್ ಕೆ.ಓ.,ದೇವಿಕೆರೆ ಹೊಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.