ADVERTISEMENT

ಕಲ್ಲುಸಕ್ಕರೆಯಲ್ಲಿ ಕಲ್ಲಿಲ್ಲ, ಮೈತ್ರಿ ಸರ್ಕಾರದಲ್ಲಿ...

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
Published 31 ಜನವರಿ 2019, 20:28 IST
Last Updated 31 ಜನವರಿ 2019, 20:28 IST

ರಾಜ್ಯದಲ್ಲಿ ಮೈತ್ರಿ ಸರ್ಕಾರ ಆರಂಭವಾದಾಗಿನಿಂದ ಉಭಯ ಪಕ್ಷಗಳಿಂದಲೂ ಸರ್ಕಾರ ಮತ್ತು ನಾಯಕರ ಕುರಿತು ಹೇಳಿಕೆ, ಪ್ರತಿಹೇಳಿಕೆಗಳು ಹೊರಬರುತ್ತಲೇ ಇವೆ.

ಸರ್ಕಾರದ ಮುಖಂಡರಂತೂ ವಿಚಿತ್ರ ಹೇಳಿಕೆಗಳನ್ನು ಕೊಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಈ ರೀತಿ ಹೇಳಿಕೆ ಕೊಡುವುದರಲ್ಲಿ ನ್ಯೂಟನ್‌ನ ಚಲನೆಯ ಮೂರನೇ ನಿಯಮ ಅನುಸರಿಸುತ್ತಿದ್ದಾರೆ ಎನಿಸುತ್ತದೆ! ಆ ಕಡೆಯಿಂದ ಬರುವ ಹೇಳಿಕೆಗೆ ಈ ಕಡೆಯಿಂದ ಪ್ರತಿಹೇಳಿಕೆ ನೀಡಿ, ಆ ಮೂಲಕ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಡುತ್ತಿದ್ದಾರಷ್ಟೆ. ಇದರಿಂದ ಸರ್ಕಾರದ ಕಾರ್ಯವೈಖರಿ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ.

ಕಲ್ಲುಸಕ್ಕರೆಯಲ್ಲಿ ಕಲ್ಲಿಲ್ಲ, ಕಲ್ಲಂಗಡಿಯಲ್ಲೂ ಕಲ್ಲಿಲ್ಲ. ಹಾಗೆಯೇ, ಮೈತ್ರಿ ಸರ್ಕಾರದಲ್ಲಿ ಮೈತ್ರಿ ಇಲ್ಲ ಎಂಬಂತಾಗಿದೆ ಈಗಿನ ಸ್ಥಿತಿ. ಉಭಯ ಪಕ್ಷಗಳ ನಾಯಕರು ಇನ್ನಾದರೂ ಹೇಳಿಕೆಗಳನ್ನು ಸಾಕುಮಾಡಿ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.