ADVERTISEMENT

ಸರ್ಕಾರಿ ಶಾಲೆ: ಬಡ್ಡಿ ಹಣ ಹಿಂಪಡೆಯದಿರಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST

ಸರ್ಕಾರಿ ಶಾಲೆಗಳಿಗೆ ನೀಡುವ ವಾರ್ಷಿಕ ನಿರ್ವಹಣಾ ಅನುದಾನ ಹಾಗೂ ಇತರ ಅನುದಾನಗಳಿಂದ ಬ್ಯಾಂಕಿನಲ್ಲಿ ಬಡ್ಡಿ ಕ್ರೋಡೀಕರಣಗೊಂಡಿರುತ್ತದೆ. ಈ ಹಣವು ಒಂದೊಂದು ಶಾಲೆಯಲ್ಲಿ ₹ 10 ಸಾವಿರದಿಂದ ಲಕ್ಷದವರೆಗೂ ಇದೆ.

ಈ ಶಾಲೆಗಳಿಗೆ ಸರ್ಕಾರ ನೀಡುವ ಅನುದಾನ ಸಾಕಾಗದು. ವಿದ್ಯುತ್ ಶುಲ್ಕಕ್ಕೇ ವಾರ್ಷಿಕ ಸುಮಾರು ₹ 5 ಸಾವಿರ ಪಾವತಿಸಬೇಕಾಗುತ್ತದೆ. ಇನ್ನು ಶಾಲೆಗೆ ಸುಣ್ಣ, ಬಣ್ಣ, ಶೌಚಾಲಯ ಸ್ವಚ್ಛತೆ ಸೇರಿದಂತೆ ಅನೇಕ ಖರ್ಚುಗಳಿರುತ್ತವೆ. ಇಂಥ ಸಂದರ್ಭದಲ್ಲಿ, ಶಾಲೆಯ ಖಾತೆಯಲ್ಲಿರುವ ಬಡ್ಡಿ ಹಣವನ್ನು ಶಾಲೆಯ ನಿರ್ವಹಣಾ ವೆಚ್ಚಕ್ಕೆ ಉಪಯೋಗಿಸಲು ಅನುಮತಿ ನೀಡುವ ಬದಲು, ಅದನ್ನು ಸರ್ಕಾರ ವಾಪಸ್‌ ಕೇಳಿರುವುದು ಸರಿಯಲ್ಲ.

ಮಕ್ಕಳಿಗೆ ಶಿಕ್ಷಣ ನೀಡಿ, ಅವರ ಬಾಳಿಗೆ ಬೆಳಕಾಗುವ ಸರ್ಕಾರಿ ಶಾಲೆಗಳ ಖಾತೆಯ ಬಡ್ಡಿ ಹಣವನ್ನು ಕೇಳುವುದು ನ್ಯಾಯವೂ ಅಲ್ಲ. ಗ್ರಾಮ ವಾಸ್ತವ್ಯಕ್ಕೆ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕೂಡಲೇ ಈ ಆದೇಶ ಹಿಂಪಡೆಯುವಂತೆ ಸೂಚಿಸಬೇಕು.
-ಈ.ಬಸವರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.