ADVERTISEMENT

ದತ್ತು ತೆಗೆದುಕೊಂಡು ಮುನ್ನಡೆಸಲಿ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:34 IST
Last Updated 9 ಜನವರಿ 2020, 17:34 IST

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ತಿಂಗಳ ವೇತನವು ಕಾಯಂ ಉಪನ್ಯಾಸಕರಿಗೆ ಸಿಗುವ ಕಾಲು ಭಾಗದಷ್ಟು ಇರುತ್ತದೆ. ಅಲ್ಲದೆ ಪ್ರತಿ ತಿಂಗಳೂ ಸರಿಯಾಗಿ ವೇತನ ಬರುವುದಿಲ್ಲ. ಜೀತದಾಳಿಗೆ ಕೊಟ್ಟಂತೆ 5-6 ತಿಂಗಳಿಗೊಮ್ಮೆ ಸರ್ಕಾರವು ವೇತನ ಬಿಡುಗಡೆ ಮಾಡುತ್ತದೆ. ಹಾಗಾದರೆ ಅತಿಥಿ ಉಪನ್ಯಾಸಕ
ರಿಗೆ ಬದುಕು ಇಲ್ಲವೇ? ಕೆಲವು ಸಂಸ್ಥೆಗಳನ್ನು ಶ್ರೀಮಂತರು ದತ್ತು ತೆಗೆದುಕೊಂಡಂತೆ, ಅತಿಥಿ ಉಪನ್ಯಾಸಕರನ್ನೂ ಯಾರಾದರೂ ದತ್ತು ತೆಗೆದುಕೊಂಡು ಮುನ್ನಡೆಸಿದರೆ ಒಳ್ಳೆಯದು.

–ಪದ್ಮಪ್ರಭ ಇಂದ್ರ,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT