ADVERTISEMENT

ಯಾವ ವೃತ್ತಿ ಯಾರಿಗೂ ಮೀಸಲಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಮಾರ್ಚ್ 2021, 19:30 IST
Last Updated 3 ಮಾರ್ಚ್ 2021, 19:30 IST

‘ಅರ್ಚಕ ವೃತ್ತಿಯನ್ನೂ ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಪೇಜಾವರ ಮಠದ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮಾರ್ಚ್‌ 1). ಅವರ ಈ ಬೇಸರಕ್ಕೆ ಅರ್ಥವೇ ಇಲ್ಲ. ಏಕೆಂದರೆ ಇಂದು ಇಂಥ ವೃತ್ತಿ ಇಂಥದ್ದೇ ಜಾತಿಯವರಿಗೆ ಮೀಸಲು ಎಂಬುದಾಗಿ ಉಳಿದಿಲ್ಲ. ಸರ್ಕಾರದ ಆಡಳಿತದಲ್ಲಿರುವ ಮುಜರಾಯಿ ದೇವಸ್ಥಾನಗಳೇ ಅಲ್ಲದೆ ಅನೇಕ ಖಾಸಗಿ ದೇವಸ್ಥಾನಗಳಲ್ಲೂ ಬ್ರಾಹ್ಮಣೇತರರು ಅರ್ಚಕ ವೃತ್ತಿಗೆ ಬೇಕಾದ ವೈದಿಕ ವಿದ್ಯೆಯನ್ನು ಕಲಿತು ಅರ್ಚಕರಾಗಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.

ವಂಶಪರಂಪರಾಗತ ಕುಲಕಸುಬುಗಳನ್ನು ಇಂದು ನೂರಕ್ಕೆ ನೂರು ಆಯಾ ಕುಲದವರೇ ಮಾಡುತ್ತಿಲ್ಲ. ನಿರ್ದಿಷ್ಟ ವೃತ್ತಿಗೆ ಬೇಕಾದ ಅರ್ಹತೆಯನ್ನು ಹೊಂದಿದ, ಆಸಕ್ತಿಯುಳ್ಳ ಯಾರು ಬೇಕಾದರೂ ಯಾವ ವೃತ್ತಿಯನ್ನಾದರೂ ನಿರ್ವಹಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ನಾವು ಜಾತ್ಯತೀತ ನೀತಿಯನ್ನು ಒಪ್ಪಿಕೊಂಡು ಏಳು ದಶಕಗಳೇ ಕಳೆದಿದ್ದರೂ ಅರ್ಚಕ ವೃತ್ತಿ ಕೇವಲ ಬ್ರಾಹ್ಮಣರಿಗೇ ಮೀಸಲು ಎಂಬ ಧೋರಣೆ ಸಂವಿಧಾನ ವಿರೋಧಿಯಾಗುತ್ತದೆ

- ಎನ್‌.ವಿ.ಅಂಬಾಮಣಿ ಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.