ADVERTISEMENT

ಕವನ ಸಂಕಲನದ ಮೇಲೆ ಮುನಿಸೇಕೆ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST

ಕನ್ನಡ ಪುಸ್ತಕಗಳ ಆಯ್ಕೆ ಸಮಿತಿಯು ಈ ವರ್ಷ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ವಿಮರ್ಶೆ, ಕಥೆ ಪುಸ್ತಕಗಳು ಸೇರಿರುವುದು ಸಂತಸದ ವಿಚಾರ. ಆದರೆ ಸಮಿತಿಗೆ ಕವನಸಂಕಲನಗಳ ಮೇಲೆ ಮುನಿಸು ಇರುವಂತಿದೆ. ಯಾಕೆಂದರೆ, ಒಂದಾದರೂ ಕವನ ಸಂಕಲನವು ಈ ಆಯ್ಕೆ ಪಟ್ಟಿಯಲ್ಲಿ ಸೇರಿಲ್ಲ. ಬಹಳಷ್ಟು ಕವನ ಸಂಕಲನಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಅನೇಕ ಉದಯೋನ್ಮುಖ ಕವಿಗಳು ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಸಮಿತಿಯು ಕವನ ಸಂಕಲನಗಳ ಪುಸ್ತಕಗಳನ್ನು ಪಟ್ಟಿಯಿಂದಲೇ ಕೈಬಿಟ್ಟಿದೆ. ಹೆಸರಿಗಷ್ಟೇ ವಚನ ಮತ್ತು ಬೇರೆ ತರಹದ ಕಾವ್ಯ ಪುಸ್ತಕಗಳನ್ನು ಹೆಸರಿಸಿದೆ. ಹಾಗಿದ್ದರೆ ಕವನ ಸಂಕಲನ ಬಿಡುಗಡೆ ಮಾಡಿದ ಕವಿಗಳು ಶಾಪಗ್ರಸ್ತರೇ?

ಬಾಲಾಜಿ ಟಿ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT