ADVERTISEMENT

ತಜ್ಞರಿಂದ ಸಲಹೆ: ಮಾರ್ಗ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 21:12 IST
Last Updated 6 ಏಪ್ರಿಲ್ 2020, 21:12 IST

‘ಹೊಸ ವೇಳಾಪಟ್ಟಿ ಪ್ರಕಾರ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುವುದಕ್ಕೂ ಮುನ್ನ ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ಒಂದು ವಾರ ಪುನರ್‌ಮನನ ತರಗತಿಗಳನ್ನು ನಡೆಸಲಾಗುವುದು. ಸುದೀರ್ಘ ರಜೆಯಲ್ಲಿರುವ ಮಕ್ಕಳನ್ನು ಪರೀಕ್ಷಾ ಮೂಡ್‌ಗೆ ತರಲು ಇದು ಅವಶ್ಯಕ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಆದರೆ ಈ ಕ್ರಮ ಸರಿಯಲ್ಲ. ಈಗಾಗಲೇ ಎಲ್ಲೆಡೆ ಕೊರೊನಾ ವೈರಾಣು ಸೋಂಕಿನ ಭೀತಿ ಹೆಚ್ಚಿದೆ. ಈ ನಡುವೆ ಬಿಸಿಲು ಸಹ ಹೆಚ್ಚಾಗಿರುವುದರಿಂದ ಮಕ್ಕಳು ಶಾಲೆಗೆ ಹೋಗಿ ಬರುವುದು ಕಷ್ಟವಾಗುತ್ತದೆ. ಪ್ರಯಾಣದಿಂದ ಹಾಗೂ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಸಮಯವೂ ವ್ಯಯವಾಗುತ್ತದೆ.

ಆದ್ದರಿಂದ ಮಾನಸಿಕ ತಜ್ಞರ ಸಲಹೆಗಳನ್ನು ವಾಟ್ಸ್‌ಆ್ಯಪ್‌ ಹಾಗೂ ಪತ್ರಿಕೆಗಳ ಮೂಲಕ ಕೊಡಿಸಬಹುದು. ಜೊತೆಗೆ, ದೂರದರ್ಶನ ಹಾಗೂ ರೇಡಿಯೊದಲ್ಲಿ ಫೋನ್‌ ಇನ್‌ಮೂಲಕವೂ ಆಯೋಜಿಸಬಹುದು. ಇದರಿಂದ, ಅಗತ್ಯರುವ ವಿದ್ಯಾರ್ಥಿಗಳು ಹಾಗೂ ಪೋಷಕರು ತಮಗೆ ಬೇಕಾದ ಪ್ರಶ್ನೆ ಕೇಳಿ, ಮಾನಸಿಕ ತಜ್ಞರಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಯನ್ನು ಬರೆಯಲು ಸಹ ನೆರವಾಗುತ್ತದೆ.

- ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.