ADVERTISEMENT

ವಾಚಕರ ವಾಣಿ | ಚಿತ್ರರಂಗ: ಪ್ರಾದೇಶಿಕ ಅಸಮಾನತೆ ಬೇಡ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST

‘ಸಿನಿಮಾ: ಜೀವಂತಿಕೆಯ ಕೊಂಡಿ ಕಳಚಿದ್ದೆಲ್ಲಿ?’ ಎಂಬ ಲೇಖನದಲ್ಲಿ ಹೇಳಿರುವಂತೆ (ಸಂಗತ, ಜುಲೈ 29), ಗುಣಮಟ್ಟದ ಸಿನಿಮಾಕ್ಕಾಗಿ ಈಗಿನ ನಿರ್ದೇಶಕರು ಹಾಗೂ ನಿರ್ಮಾಪಕರು ಯುಕ್ತ ‘ಹೋಂ ವರ್ಕ್’ ಮಾಡುವುದು ಅಗತ್ಯ. ಇದರ ಜೊತೆಗೆ ಕನ್ನಡ ಭಾಷಾ ಬಳಕೆ ಹಾಗೂ ಪ್ರಾದೇಶಿಕ ಅಸಮಾನತೆಯ ಕಡೆಗೂ ಕನ್ನಡ ಚಿತ್ರರಂಗ ಗಮನ ಹರಿಸಬೇಕಿದೆ. ಪ್ರಸ್ತುತ ಕನ್ನಡ ಚಿತ್ರರಂಗದ ಪ್ರಭಾವಿ ನಟ, ನಟಿಯರ ಮೂಲ ಹಾಗೂ ಅವರು ಸಿನಿಮಾದಲ್ಲಿ ಬಳಸುವ ಭಾಷಾ ಸೊಗಡು ಹೆಚ್ಚಾಗಿ ದಕ್ಷಿಣ ಕರ್ನಾಟಕ ಭಾಗದ್ದಾಗಿದೆ. ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಕಾಣುವುದು ತೀರಾ ಕಡಿಮೆ. ಇದರೊಂದಿಗೆ ಚಿತ್ರೀಕರಣ ಕೂಡ ಬೆಂಗಳೂರು ಸುತ್ತಮುತ್ತಲೇ ಹೆಚ್ಚಾಗಿ ನಡೆಯುತ್ತಿದೆ.

ಇವೆಲ್ಲವುಗಳಿಂದ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಜನರು ಅನ್ಯ ಭಾಷೆಯ ಚಿತ್ರಗಳ ಬಗ್ಗೆ ಒಲವು ತೋರುತ್ತಿದ್ದಾರೆ. ಡಬ್ಬಿಂಗ್ ಕುರಿತು ಪರ- ವಿರೋಧದ ಚರ್ಚೆಗಳು ಈಗ ನಡೆಯುತ್ತಿವೆ. ಮುಂದೊಂದು ದಿನ ಕನ್ನಡ ಚಿತ್ರಗಳನ್ನು ಪ್ರಾದೇಶಿಕ ಭಾಷಾ ಸೊಗಡಿಗೆ ತಕ್ಕಂತೆ ಕನ್ನಡಕ್ಕೇ ಡಬ್ ಮಾಡುವ ದಿನ ಬಂದರೂ ಅಚ್ಚರಿಯಿಲ್ಲ!

ಅಂಕಿತ್ ಜಿ.ಎನ್.,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.