ADVERTISEMENT

ವಾಚಕರ ವಾಣಿ | ಕೆರೆ ಹೂಳು: ಆಗಬೇಕಿದೆ ಸದ್ಬಳಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST

ಹಾವೇರಿ ಪಟ್ಟಣದ ಕೆರೆಗಳಲ್ಲಿ ಹೂಳು ತುಂಬಿದ ಕಾರಣ ಅಂತರ್ಜಲ ಮಟ್ಟ ಕುಸಿದು ಬಾವಿ, ಕೊಳವೆಬಾವಿಗಳು ಬತ್ತಿಹೋಗಿದ್ದವು. 2004ರಲ್ಲಿ ರಾಷ್ಟ್ರೀಯ ಹೆದ್ದಾರಿ ನಂ.4ರ ವಿಸ್ತರಣೆ ನಡೆದಿತ್ತು. ಆ ಸಂದರ್ಭದಲ್ಲಿ ಪಟ್ಟಣದ ಕೆರೆಗಳ ಹೂಳು ತೆಗೆದು ಅದನ್ನು ರಸ್ತೆ ವಿಸ್ತರಣೆಗೆ ಬಳಸಲು ನಗರದ ಜನರ ಪರವಾಗಿ ಜಿಲ್ಲಾಧಿಕಾರಿಗೆ ಹಾಗೂ ಕೇಂದ್ರ ಭೂಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರ್ಕಾರವು ನಾಲ್ಕು ಕೆರೆಗಳ ಹೂಳನ್ನು ತೆಗೆದು ರಸ್ತೆ ವಿಸ್ತರಣೆಗೆ ಬಳಸಿತು. ಇದರಿಂದ ಹಾವೇರಿ ನಗರದ ಅಂತರ್ಜಲ ಮಟ್ಟ ಏರಿಕೆಯಾಗುವುದರೊಂದಿಗೆ ಬಾವಿ, ಕೊಳವೆಬಾವಿಗಳು ಪುನಶ್ಚೇತನಗೊಂಡವು. ರಸ್ತೆ ವಿಸ್ತರಣೆಯ ವೆಚ್ಚ ಕಡಿಮೆಯಾಯಿತು.

ರಸ್ತೆ ನಿರ್ಮಾಣದಂತಹ ಕೆಲಸಗಳಿಗೆ ಕೆರೆಗಳ ಹೂಳು ಹೆಚ್ಚು ಹೆಚ್ಚು ಬಳಕೆ ಆಗಬೇಕು. ಇದರಿಂದ ವಿವಿಧ ಗ್ರಾಮ- ನಗರಗಳ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಅನುಕೂಲವಾಗುತ್ತದೆ. ಜೊತೆಗೆ ಹೂಳು ತೆಗೆದ ಕೆರೆಗಳಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಏರಿಕೆಯಾಗಲಿದೆ.

-ಬಸವರಾಜ ಹುಡೇದಗಡ್ಡಿ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.