ADVERTISEMENT

ವಾಚಕರ ವಾಣಿ: ಈಗಲಾದರೂ ಪ್ರಕೃತಿಗೆ ನಮಿಸೋಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:48 IST
Last Updated 21 ಅಕ್ಟೋಬರ್ 2020, 17:48 IST

ಭೂಮಿ, ಜೀವಜಂತುಗಳು ಹುಟ್ಟಿಬಂದ ರೀತಿ ಹಾಗೂ ಮನುಷ್ಯ ತಾನೇ ತೀವ್ರಗತಿಯಲ್ಲಿ ನಡೆದುಬಂದ ಪ್ರಗತಿಪಥದಿಂದಾಗಿ ತಂದುಕೊಂಡ ಅಧೋಗತಿಯನ್ನು ಸತೀಶ್ ತೀರ್ಥಹಳ್ಳಿ ಕಾವ್ಯಾತ್ಮಕವಾಗಿ ಬಣ್ಣಿಸಿದ್ದಾರೆ (ಸಂಗತ, ಅ. 19). ಅಂತರಂಗದ ಒಳನೋಟವನ್ನೇ ಮರೆತು ಬರೀ ಬಹಿರಂಗದ ಬದುಕಿಗೆ ತೆರೆದುಕೊಂಡವರು, ಖ್ಯಾತನಾಮರಾಗಲು ಹವಣಿಸುತ್ತಾ, ಮನ್ನಣೆಗಾಗಿ ಕೊಳಕು ವ್ಯವಸ್ಥೆಯಲ್ಲಿ ಪಾಲ್ಗೊಂಡವರು ಇಂದಿನ ಸ್ಥಿತಿಗೆ ಏನು ಹೇಳುತ್ತಾರೆ?

ಮನುಷ್ಯರು ಭೂಮಿಗೆ ಅತಿಥಿಗಳಾಗಿ ಬಂದವರೇ ವಿನಾ ಒಡೆಯರಲ್ಲ. ಈಗಲಾದರೂ ನಮ್ಮ ಅಹಂ ಬದಿಗಿಟ್ಟು, ತಪ್ಪೊಪ್ಪಿಕೊಂಡು, ಪ್ರಕೃತಿಗೆ ನಮೋ ಎನಬಾರದೇ?

- ಸಿದ್ರಾಮಪ್ಪ ದಿನ್ನಿ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.