ADVERTISEMENT

ಯಡಿಯೂರಪ್ಪನವರ ಅವಸರದ ನಡೆಗೆ ಸ್ವಾಮೀಜಿ ಬೇಸರ: ಓದುಗರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:46 IST
Last Updated 5 ನವೆಂಬರ್ 2019, 19:46 IST
   

ಜನಪ್ರತಿನಿಧಿಗಳು ಸಭೆ–ಸಮಾರಂಭಗಳಿಗೆ ಹಾಗೂ ಸಾರ್ವಜನಿಕ ಕುಂದುಕೊರತೆ ಆಲಿಸುವ ಸ್ಥಳಗಳಿಗೆ ಗೊತ್ತು ಪಡಿಸಿದ ಸಮಯಕ್ಕೆ ಹೋಗುವುದೇ ಅಪರೂಪ. ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ಭೋವಿ ಸಮುದಾಯದ ಸಮಾವೇಶದಲ್ಲಿ, ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ತರಾತುರಿಯನ್ನು ಗಮನಿಸಿದ ಭೋವಿ ಗುರುಪೀಠದ ಸ್ವಾಮೀಜಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಸರಿಯಾಗಿದೆ.

ನೆರೆ ಪ್ರದೇಶಗಳಿಗೆ ಭೇಟಿ ನೀಡಿದ್ದಾಗಲೂ ಮುಖ್ಯಮಂತ್ರಿಯವರ ಇದೇ ಬಗೆಯ ವರ್ತನೆಯು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಒಂದೇ ದಿನ ಎಷ್ಟೊಂದು ಕಾರ್ಯಕ್ರಮಗಳನ್ನು ಹಾಕಿಕೊಂಡು, ಸರಿಯಾದ ಸಮಯಕ್ಕೆ ಬರದೆ ಎಲ್ಲರನ್ನೂ ಕಾಯಿಸುವುದು, ಯಾವ ಕಾರ್ಯಕ್ರಮದಲ್ಲೂ ಸರಿಯಾಗಿ ತೊಡಗಿಕೊಳ್ಳದೇ ಇರುವುದರಿಂದ ಯಾರಿಗೆ ತಾನೇ ಲಾಭವಾಗುತ್ತದೆ? ಸಾರ್ವಜನಿಕರೊಂದಿಗೆ ಜನಪ್ರತಿನಿಧಿಗಳು ಬೆರೆತು ತಾಳ್ಮೆಯಿಂದ ಅವರ ಅಹವಾಲು ಆಲಿಸುವುದು ಅವಶ್ಯಕ.
-ವಿಶ್ವನಾಥ ರಟ್ಟಿಹಳ್ಳಿ, ಹಾವೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.