ADVERTISEMENT

ಬಿಸಿಯುಗದ ಖಡಕ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST
   

ಜಾಗತಿಕ ಹವಾಮಾನ ತುರ್ತುಸ್ಥಿತಿ ಕುರಿತು ‘ಮುಂದಿದೆ ಕರಾಳ ದಿನ’ ಹೆಸರಿನ ಪಿಟಿಐ ವರದಿಯನ್ನು‘ಪ್ರಜಾವಾಣಿ’ ಮುಖಪುಟದ ಮೊದಲ ಸುದ್ದಿಯಾಗಿ ಪ್ರಕಟಿಸಿ (ನ.9) ಯೋಗ್ಯ ಕೆಲಸ ಮಾಡಿದೆ. ಬಿಸಿಪ್ರಳಯದ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಅದರ ಕರಾಳತೆಯ ಲಕ್ಷಣಗಳನ್ನು ಜನಸಾಮಾನ್ಯರು ಈಗಾಗಲೇ ಎದುರಿಸುತ್ತಿದ್ದಾರೆ.

ಇನ್ನೂ ನಿರ್ಲಕ್ಷ್ಯ ಮಾಡಿದರೆ ಅತ್ಯಂತ ಜಾಸ್ತಿ ಉತ್ಪಾತಗಳು ಭಾರತದಲ್ಲೇ ಸಂಭವಿಸಲಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ, ಭಾರತ ದೇಶವೇ ಇಡೀ ಜಗತ್ತಿಗೆ ಬದುಕುಳಿಯುವ ಮಾದರಿಯನ್ನು ತೋರಿಸುವ ಸಾಧ್ಯತೆಯೂ ಇದೆ. ಆದರೂ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಮುತ್ಸದ್ದಿಗಳು ಇಂಥ ಮಹತ್ವದ ಸುದ್ದಿಯನ್ನು ಕಡೆಗಣಿಸುವ ಧೋರಣೆ ತಳೆದಿರುವಾಗ ‘ಪ್ರಜಾವಾಣಿ’ ಇದನ್ನು ಮೊದಲ ಸುದ್ದಿಯಾಗಿ ಪ್ರಕಟಿಸಿದೆ. ಅಭಿನಂದನೆಗಳು.
-ಕೆ.ಜಾನಕಿರಾಮ, ಚಿಕ್ಕಬಳ್ಳಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.