ADVERTISEMENT

ವಾಚಕರ ವಾಣಿ | ಅತಂತ್ರ ಸ್ಥಿತಿಯ ಪರಿಣಾಮ...

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 20:48 IST
Last Updated 14 ಆಗಸ್ಟ್ 2022, 20:48 IST

‘ಸರ್ಕಾರ ನಡೀತಾ ಇಲ್ಲ. ಇಲ್ಲಿ, ಮ್ಯಾನೇಜ್‌ ಮಾಡ್ತಾ ಇದೀವಿ ಅಷ್ಟೇ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದುರಾಜ್ಯ ಸರ್ಕಾರಕ್ಕೆ ನಿಜಕ್ಕೂ ಮುಜುಗರ ತರುವಂತಹುದು. ಆ ಪಕ್ಷದ ಒಂದಷ್ಟು ಶಾಸಕರನ್ನು ಈ ಪಕ್ಷದ ಒಂದಷ್ಟು ಶಾಸಕರನ್ನು ಸೆಳೆದುಕೊಂಡು ಅಧಿಕಾರ ಹಿಡಿಯುವ ಯಾವುದೇ ಪಕ್ಷದ ನೇತೃತ್ವದ ಸರ್ಕಾರದಿಂದ ಇದಕ್ಕಿಂತಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ?

ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದ ಕಾರಣ ಉಂಟಾದ ಅತಂತ್ರ ಸ್ಥಿತಿಯ ಪರಿಣಾಮಗಳನ್ನು ಜನ ಅನುಭವಿಸಬೇಕಾಗಿದೆ. ಇಂತಹ ಬೆಳವಣಿಗೆಗಳು ಮತದಾರರಲ್ಲಿ ಎಚ್ಚರ ಮೂಡಿಸಬೇಕು. ಮುಂದಿನ ಚುನಾವಣೆಯಲ್ಲಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಲು ಮತ್ತು ಸೇವಾಬದ್ಧತೆಯುಳ್ಳಪ್ರತಿನಿಧಿಗಳನ್ನು ಆರಿಸಲು ಪ್ರೇರಣೆ ನೀಡಬೇಕು.
–ವಿಶ್ವನಾಥ್‌ ಕೆ.ಟಿ,ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT