ADVERTISEMENT

ವಾಚಕರ ವಾಣಿ: ಭಾಷಾ ಪ್ರೇಮ; ಸಂಕುಚಿತ ನಡೆ ತರವಲ್ಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:45 IST
Last Updated 18 ಆಗಸ್ಟ್ 2020, 19:45 IST

ಬಸವಣ್ಣ ಹನ್ನೆರಡನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ ಸಮಾಜ ಸುಧಾರಕ. ಆಡುಕನ್ನಡವನ್ನು ಬರಹದಲ್ಲಿ ತಂದು ಕನ್ನಡ ಭಾಷೆಗೆ ಜನಪದ ಸೊಗಡು ಕೊಟ್ಟವರು ಅವರು. ಆದರೆ ಇತ್ತೀಚೆಗೆ ಬೆಂಗಳೂರಿನ ಅವರ ಪ್ರತಿಮೆಯೊಂದರ ಅಡಿಯಲ್ಲಿ ಬಸವಣ್ಣನವರ ಸಂದೇಶಗಳನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಸಲಾಗಿತ್ತು. ‘ಇಲ್ಲಿ ಹಿಂದಿ ಏಕೆ’ ಎಂದು ಕೆಲವು ಕನ್ನಡ ಪ್ರೇಮಿಗಳು ಬೇಸರಿಸಿದ್ದರಿಂದ, ಅದಕ್ಕೆ ಮಣಿದು ಹಿಂದಿಯನ್ನು ಬಣ್ಣದಲ್ಲಿ ಅಳಿಸಿರುವುದು ವಿಷಾದದ ಸಂಗತಿ.

ಇಂದು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆ ಹಿಂದಿ. ಅದರಲ್ಲಿ ಬಸವಣ್ಣನವರ ತತ್ವಗಳು ಇದ್ದರೆ ಅವು ಅನೇಕರನ್ನು ತಲುಪುತ್ತವೆ. ಬೆಂಗಳೂರಿಗೆ ಬರುವ ಉತ್ತರ ಭಾರತೀಯರು ಹಿಂದಿಯಲ್ಲಿ ಈ ವಚನಗಳನ್ನು ನೋಡಿ ಪುಳಕಿತರಾಗಿ ಆ ಸಂದೇಶಕ್ಕೆ ವಾಹಕರಾಗುವುದರಲ್ಲಿ ಸಂದೇಹವೇ ಇಲ್ಲ. ಇಂದು ಪುರಂದರರ ಕೀರ್ತನೆಗಳನ್ನು ಬೇರೆ ಭಾಷೆಯವರೇ ಸಂಗೀತದಲ್ಲಿ ಅಳವಡಿಸಿ ಅವು ಹೆಚ್ಚು ಜನಪ್ರಿಯವಾಗುವಂತೆ ಮಾಡಿದ ಸಂಗತಿಯನ್ನು ಕನ್ನಡಿಗರು ಮರೆಯಬಾರದು. ಭಾಷಾಪ್ರೇಮ ಸ್ವಾಗತಾರ್ಹ. ಆದರೆ ಕನ್ನಡಿಗರ ಸಾಧನೆಯನ್ನು ಕರ್ನಾಟಕಕ್ಕೇ ಸೀಮಿತಗೊಳಿಸುವ ಸಂಕುಚಿತ ಧೋರಣೆ ಬೇಡ.
-ಸತ್ಯಬೋಧ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT