ನಿವೃತ್ತಿಯಾಗಿಸುವವರೆಗೆ ರಾಜಕಾರಣಿಗಳು ಮತ್ತು ಕೆಲವು ಕ್ರಿಕೆಟ್ ಆಟಗಾರರು ತಾವಾಗಿಯೇ ನಿವೃತ್ತಿ ಹೊಂದುವುದಿಲ್ಲ ಎನ್ನುವ ಟೀಕೆ ದೇಶದಲ್ಲಿ ಕೇಳಿಬರುತ್ತಿರುವಾಗ, ಮಹೇಂದ್ರ ಸಿಂಗ್ ಧೋನಿ ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಧೋನಿ ಅವರ ನಿವೃತ್ತಿಯ ಹೆಜ್ಜೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ತಮ್ಮ ನಿವೃತ್ತಿಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯಲಿ ಎಂಬ ಇಚ್ಛೆ ಅವರಿಗೆ ಇದ್ದಂತಿದೆ. ಅವರ ನಿವೃತ್ತಿಯಿಂದ ಭಾರತೀಯ ಕ್ರಿಕೆಟ್‌ಗೆ ಭಾರಿ ನಷ್ಟವಾದರೂ ಯುವಪ್ರತಿಭೆಗಳ ಭವಿಷ್ಯದ ದೃಷ್ಟಿಯಿಂದ ಇದನ್ನು ಶ್ಲಾಘನೀಯ ಹೆಜ್ಜೆ ಎನ್ನಬಹುದು.
-ರಮಾನಂದ ಶರ್ಮಾ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.