ADVERTISEMENT

ಒಣ ಪ್ರತಿಷ್ಠೆ, ಬಲಾಬಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:45 IST
Last Updated 24 ನವೆಂಬರ್ 2020, 19:45 IST

ಕೊರೊನಾದ ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡುವ, ಅದರಲ್ಲೂ ಚಿನ್ನದ ಕಿರೀಟ,ಕತ್ತಿ,ಗದೆ ಮುಂತಾದವನ್ನು ಜನಸಾಮಾನ್ಯರು ಕೊಡುವ ಔಚಿತ್ಯ ಏನೆಂದು ಅರ್ಥವಾಗುತ್ತಿಲ್ಲ.

ಒಂದು ವೇಳೆ ಮಹತ್ವವಾದ ಕೆಲಸಗಳನ್ನು ಮಾಡಿದ್ದರೂ ತಮ್ಮ ಅಭಿಮಾನಿಗಳು ಎಂದು ಕರೆದುಕೊಳ್ಳುವವರುಎಷ್ಟೇ ಒತ್ತಾಯ ಮಾಡಿದರೂ ಜನನಾಯಕರುಮನಸ್ಸುಮಾಡಿದರೆ ಇಂತಹ ಪ್ರಹಸನನಡೆಯದಂತೆ ನೋಡಿಕೊಳ್ಳಬಹುದು. ಕೇವಲ ತಮ್ಮ ಒಣಪ್ರತಿಷ್ಠೆಗೆಹಾಗೂ ಬಲಾಬಲ ಪ್ರದರ್ಶಿಸುವ ಈ ಪದ್ಧತಿಗೆ ಮಂಗಳ ಹಾಡಬೇಕಿದೆ.
ಕಡೂರುಫಣಿಶಂಕರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT