ADVERTISEMENT

ವಾಚಕರ ವಾಣಿ | ಅವರಿಗೆ ಉದ್ಯೋಗವಿಲ್ಲ, ಇವರಿಗೆ ಭದ್ರತೆಯಿಲ್ಲ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 21:58 IST
Last Updated 15 ಜನವರಿ 2023, 21:58 IST

ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಫೆಬ್ರುವರಿ 6ರಿಂದ ಅನಿರ್ದಿಷ್ಟ ಅವಧಿಯ ಧರಣಿ ನಡೆಸಲಿರುವುದಾಗಿ ವರದಿಯಾಗಿದೆ. ಸರ್ಕಾರವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಹಲವು ಕೆಲಸಗಳಿಗೆ ಕಡಿಮೆ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳುತ್ತದೆ. ಕೆಲವು ವರ್ಷಗಳ ನಂತರ ಅವರು ಕೆಲಸದ ಭದ್ರತೆಗಾಗಿ ಆಗ್ರಹಿಸಿ ಧರಣಿ ನಡೆಸುವುದು ಮತ್ತು ಕೆಲಸಕ್ಕೆ ಹಾಜರಾಗದಿರುವುದು ಸರ್ವೇಸಾಮಾನ್ಯವಾಗಿದೆ.

ಇಂತಹ ಸಂದರ್ಭದಲ್ಲಿ ಸರ್ಕಾರ ಒಂದಿಷ್ಟು ಸಂಬಳ ಹೆಚ್ಚು ಮಾಡಿ ಅವರನ್ನು ಸಮಾಧಾನಪಡಿಸುವುದು ರೂಢಿಯಲ್ಲಿದೆ. ಸರ್ಕಾರದ ಈ ಧೋರಣೆಯಿಂದಾಗಿ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳ ಪಾಲಿಗೆ ಸರ್ಕಾರಿ ಕೆಲಸಗಳು ಗಗನಕುಸುಮ ಆಗುತ್ತಿವೆ. ಮತ್ತೊಂದೆಡೆ, ಕೆಲಸವಿದ್ದೂ ಉದ್ಯೋಗ ಭದ್ರತೆ ಇಲ್ಲದೆ ಗುತ್ತಿಗೆ ನೌಕರರು ಪರದಾಡುವಂತಾಗಿದೆ. ಹೀಗೆ ಎರಡೂ ವರ್ಗದವರ ಬದುಕು ಅತಂತ್ರವಾಗಿದೆ.
ಸುನೀಲ್ ಟಿ.ಪಿ., ತಳಗವಾದಿ, ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT