ADVERTISEMENT

ಪ್ರಶ್ನೆಪತ್ರಿಕೆಗಳ ಸ್ವರೂಪದಲ್ಲಿ ಬದಲಾವಣೆ: ದಿಢೀರ್ ಬದಲಾವಣೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 20:34 IST
Last Updated 3 ನವೆಂಬರ್ 2019, 20:34 IST
   

ಎಂಟನೇ ತರಗತಿ ಹಾಗೂ ಒಂಬತ್ತನೇ ತರಗತಿಯ ಪ್ರಶ್ನೆಪತ್ರಿಕೆಗಳ ಸ್ವರೂಪದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ. ಇಂತಹ ವಿಷಯಗಳಲ್ಲಿ ದಿಢೀರ್ ತೀರ್ಮಾನ ಸರಿಯಲ್ಲ.

ಬದಲಾವಣೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸುವುದು ಅಗತ್ಯ. ಅದಕ್ಕೆ ಸಮಯ ಬೇಕಾಗುತ್ತದೆ. ಇಲ್ಲವಾದರೆ ಅವರು ಗಾಬರಿಗೆ ಒಳಗಾಗುತ್ತಾರೆ. ಮಕ್ಕಳ ಪಠ್ಯ, ಪರೀಕ್ಷೆಯಂಥವುಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಜೂನ್ ಹೊತ್ತಿಗೇ ಆಗಬೇಕು.

ಆಗ ಮಕ್ಕಳು ಮಾನಸಿಕವಾಗಿ ಸಿದ್ಧರಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುತ್ತಾರೆ. ಹೀಗಾಗಿ, ಈಗಿನ ತೀರ್ಮಾನವನ್ನು ಮುಂದಿನ ವರ್ಷದಿಂದ ಜಾರಿಗೆ ತರುವುದು ಒಳ್ಳೆಯದು.
-ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.