ADVERTISEMENT

ವಾಚಕರ ವಾಣಿ: ನೇಮಕಾತಿಯಲ್ಲಿ ಪಾರದರ್ಶಕತೆ ಅತ್ಯಗತ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 19:30 IST
Last Updated 17 ನವೆಂಬರ್ 2020, 19:30 IST

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಎರಡು ದಶಕಗಳಿಂದ ಈಚೆಗೆ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾದದ್ದೇ ಹೆಚ್ಚು. ಇದರ ಹೊಣೆಯನ್ನು ಅಧಿಕಾರಸ್ಥರಾಜಕಾರಣಿಗಳು ಮತ್ತು ಆಯೋಗದ ಆಡಳಿತ ನಿರ್ವಹಣೆಯ ಹೊಣೆ ಹೊತ್ತವರೇ ಹೊರಬೇಕಾಗಿದೆ. ಇವರೊಂದಿಗೆ ಮಧ್ಯವರ್ತಿಗಳು ಸೇರಿ ಸಂಸ್ಥೆಯ ಹೆಸರಿಗೆ ಮಸಿ ಬಳಿದಿದ್ದಾರೆ. ಈ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ನ್ಯಾಯಾಲಯಗಳಿಂದ ಹಲವಾರು ಸಲ ಕಟುಮಾತುಗಳು ಕೇಳಿಬಂದಿದ್ದರೂ ಅದರಿಂದ ಯಾವುದೇ ಸಕಾರಾತ್ಮಕ ಪರಿಣಾಮ ಆಗದಿರುವುದು ದುರದೃಷ್ಟಕರ.

ಕೆಪಿಎಸ್‌ಸಿಯಿಂದ ನಡೆಯುವ ನೇಮಕಾತಿಗಳಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗದಿದ್ದರೆ, ಅದು ಇದ್ದು
ಪ್ರಯೋಜನವಾದರೂ ಏನು? ನೇಮಕಾತಿಗಳು ಈಗಿನ ರೀತಿಯಲ್ಲೇ ನಡೆಯುವುದಾದರೆ, ಅದಕ್ಕಿಂತಹುದ್ದೆಗಳನ್ನು ಬಹಿರಂಗವಾಗಿ ಹರಾಜು ಹಾಕಿ ಭರ್ತಿ ಮಾಡಿಕೊಳ್ಳುವುದೇ ಲೇಸು.

-ನಿಂಗಪ್ಪ ಎಚ್.,ಹುಕ್ಕೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.