ADVERTISEMENT

ಭಾಷಾ ಅಧ್ಯಯನ ಕೇಂದ್ರ ಮುಚ್ಚಬೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST

‘ಸಂಸ್ಕೃತ ಎಂಬ ಮಾಯಾಮೃಗ’ ಎಂಬ ಲೇಖನದಲ್ಲಿ (ಸಂಗತ, ಜ. 22) ಸಿ.ಎನ್.‌ರಾಮಚಂದ್ರನ್‌ ಅವರು ಮಂಡಿಸಿರುವ ವಿಚಾರಗಳು ಕೆಳಗಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ:

1. ಭಾಷೆಯ ಕಲಿಕೆಯು ಕೃಷಿ, ಹೋಟೆಲ್‌, ಪತ್ರಿಕೋದ್ಯಮ, ವೈದ್ಯಕೀಯ, ತಾಂತ್ರಿಕ ಇತ್ಯಾದಿ ಕ್ಷೇತ್ರ
ಗಳಲ್ಲಿ ವೃತ್ತಿ ಅಥವಾ ಉದ್ಯಮ ನಡೆಸಲು ನೆರವಾಗಬೇಕು ಎಂಬುದು ಅವರ ವಾದ. ಇದನ್ನು ಒಪ್ಪಿದರೆ ನಮ್ಮ ರಾಜ್ಯ ಹಾಗೂ ದೇಶದಲ್ಲಿನ ಹಳಗನ್ನಡ ಹಾಗೂ ಇನ್ನೂ ಹಲವಾರು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಅಧ್ಯಯನ ಕೇಂದ್ರಗಳನ್ನೂ ಮುಚ್ಚಬೇಕಾಗುತ್ತದೆ. ಅಲ್ಲವೇ?

2. ಕರ್ನಾಟಕ ಸರ್ಕಾರ ಇಂಗ್ಲಿಷ್‌ ಬೋಧನೆಗೆ ಹೆಚ್ಚಿನ ಅನುವು ಮಾಡಿಕೊಡುವ ಪ್ರಬುದ್ಧತೆಯನ್ನು
ಪ್ರದರ್ಶಿಸಬಲ್ಲದೇ ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಕನ್ನಡ ಮಾಧ್ಶಮ ಶಾಲೆಗಳನ್ನು ಮುಚ್ಚುತ್ತಾ, ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಇಂಗ್ಲಿಷ್‌ ಬೋಧನೆಗೆ ಬಹಳಷ್ಟು ಒತ್ತು ಕೊಡುತ್ತಿರುವ ಸರ್ಕಾರದ ನಡೆ ಇವರಿಗೆ ಕಾಣಿಸುತ್ತಿಲ್ಲವೇ? ಕನ್ನಡ ಭಾಷೆಯ ಹಿತದೃಷ್ಟಿಯಿಂದ ಇದು ಕನ್ನಡಿಗರಲ್ಲಿ ಆತಂಕವನ್ನು ಉಂಟುಮಾಡುವ ವಿಚಾರವಲ್ಲವೇ?

ADVERTISEMENT

3. ದೇವಭಾಷೆಗೆ ದೇವಲೋಕದಿಂದ ಸುವರ್ಣ ಸೃಷ್ಟಿಯಾಗುವುದೇ ಎಂದು ಕೇಳಿದ್ದಾರೆ! ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಸರ್ಕಾರದ ಬೊಕ್ಕಸದಿಂದ ಸಂದಾಯವಾಗುವ ಹಣ ಆಕಾಶದಿಂದ ಉದುರುವುದೇ?

- ಡಾ. ಎಂ.ರವೀಂದ್ರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.