ADVERTISEMENT

ಮೀನುಗಾರಿಕೆ: ತಂತ್ರಜ್ಞಾನ ಬಳಕೆಯಾಗಲಿ

ಶ್ರೀನಿವಾಸ್ ಚಕ್ರವರ್ತಿ
Published 10 ಜನವರಿ 2019, 20:26 IST
Last Updated 10 ಜನವರಿ 2019, 20:26 IST

ಏಳು ಮಂದಿ ಮೀನುಗಾರರನ್ನು ಹೊತ್ತುಕೊಂಡು ಮಲ್ಪೆ ಬಂದರಿನಿಂದ ತೆರಳಿದ್ದ ಮೀನುಗಾರಿಕಾ ಬೋಟ್‌ ಒಂದು ನಾಪತ್ತೆಯಾಗಿ ತಿಂಗಳಾಗುತ್ತಾ ಬಂದಿದೆ. ಈ ಮೀನುಗಾರರ ಪರಿಸ್ಥಿತಿ ಏನಾಗಿದೆ ಎಂದು ತಿಳಿಯಲು ಈ ವರೆಗೆ ಸಾಧ್ಯವಾಗಿಲ್ಲ. ಅವರ ಮನೆಯವರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.‌

ಅತ್ಯಾಧುನಿಕ ತಂತ್ರಜ್ಞಾನವಿರುವ ಇಂದಿನ ದಿನಮಾನದಲ್ಲೂ ನಾಪತ್ತೆಯಾದ ಬೋಟ್‌ ಹುಡುಕಲು ಇಷ್ಟೊಂದು ಕಷ್ಟವಾಗುತ್ತದೆ ಎಂಬುದು ಬೇಸರದ ವಿಚಾರ. ಸಾವಿರಾರು ಮೀನುಗಾರರು ಹಗಲು ರಾತ್ರಿ ಎನ್ನದೇ ಸಮುದ್ರದ ದಡದಿಂದ ಬಹುದೂರದವರೆಗೂ ತೆರಳಿ ಬದುಕಿನ ಹೋರಾಟ ನಡೆಸುತ್ತಾರೆ.

ಹೀಗೆ ಮೀನುಗಾರಿಕೆಗೆ ಹೋಗುವ ಬೋಟ್‌ಗಳನ್ನು ಟ್ರ್ಯಾಕ್ ಮಾಡುವಂಥ ವ್ಯವಸ್ಥೆ ತುರ್ತಾಗಿ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಟ್ಟಾಗಿ ಇಂಥ ವ್ಯವಸ್ಥೆಯೊಂದನ್ನು ರೂಪಿಸಬೇಕು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.