ADVERTISEMENT

ವಾಚಕರ ವಾಣಿ | ಬಾಗಿನ ಅರ್ಪಿಸುವ ಸಂಭ್ರಮ ಬೇಕೇ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST

ಈಗ ಎಲ್ಲೆಡೆ ಭರಪೂರ ಮಳೆಯಿಂದಾಗಿ ಹಳ್ಳ, ಕೆರೆ, ಚೆಕ್ ಡ್ಯಾಂಗಳು ತುಂಬಿ ಅನ್ನದಾತನ ಮೊಗದಲ್ಲಿ ಮಂದಹಾಸ ಕಾಣುತ್ತಿದೆ. ಆದರೂ ನಾಡಿನಾದ್ಯಂತ ಕೋವಿಡ್‌ನ ಆರ್ಭಟದಲ್ಲಿ ಆತಂಕದ ಸ್ಥಿತಿ ಉಂಟಾಗಿದೆ. ಆದರೆ, ಭರ್ತಿಯಾದ ಹಳ್ಳ, ಕೆರೆ, ಚೆಕ್ ಡ್ಯಾಂಗಳಿಗೆ ಬಾಗಿನ ಅರ್ಪಿಸಲು ಜನಪ್ರತಿನಿಧಿಗಳು ಜನಸಾಮಾನ್ಯರ ಒಡಗೂಡಿ ಮುಂದಾಗುತ್ತಿದ್ದಾರೆ. ಕೊರೊನಾ ಸೋಂಕಿನ ಈ ಸಮಯದಲ್ಲಿ ಬಾಗಿನ ಅರ್ಪಿಸುವ ಸಂಭ್ರಮ ಬೇಕೇ?

ದಿನಬೆಳಗಾದರೆ ಕೊರೊನಾ ಸೋಂಕಿತರ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದನ್ನು ನೋಡುತ್ತಿದ್ದೇವೆ. ಜನಪ್ರತಿನಿಧಿಗಳಿಗೆ ಕೊರೊನಾ ಪಾಸಿಟಿವ್ ಬಂದರೆ ಎಲ್ಲಿಲ್ಲದ ಸೌಲಭ್ಯಗಳನ್ನು ಪಡೆದು ಗುಣಮುಖರಾಗುತ್ತಾರೆ. ಆದರೆ, ಜನಸಾಮಾನ್ಯರಿಗೆ ಸೋಂಕು ತಗುಲಿದರೆ ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಬಾಗಿನ ಅರ್ಪಿಸುವ ಕಾರ್ಯವನ್ನು ನಿಲ್ಲಿಸುವುದು ಒಳ್ಳೆಯದು.

-ರಘುನಾಥ ರಾವ್ ತಾಪ್ಸೆ,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.