ADVERTISEMENT

ಪಶ್ಚಾತ್ತಾಪ ಬೇಡವೇ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:16 IST
Last Updated 11 ಫೆಬ್ರುವರಿ 2019, 20:16 IST

ಯಾವುದೇ ಒಂದು ರಾಜಕೀಯ ಪಕ್ಷ, ಚುನಾವಣಾಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಬೇಕು. ಆದರೆ, ನಮ್ಮ ಬಹುಪಾಲು ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಆ ಭರವಸೆಗಳನ್ನು ಮರೆಯುತ್ತವೆ. ಪ್ರಧಾನಿ ನರೇಂದ್ರ ಮೋದಿಯವರೂ ಇದಕ್ಕೆ ಹೊರತಲ್ಲ. ಅವರ ಮಾತಿನ ಧಾಟಿ ನೋಡಿದರೆ ಈ ವಿಷಯದಲ್ಲಿ ಮತದಾರರು ತಮಗೆ ವಿಶೇಷ ರಿಯಾಯಿತಿ ನೀಡಿದ್ದಾರೆ ಎಂದು ಅವರು ಭಾವಿಸಿದಂತಿದೆ.

ಮೋದಿಯವರು ಬಹಳ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದರು. ಅದರಲ್ಲಿ ಬಹುಪಾಲು ಭರವಸೆಗಳನ್ನು ಈಡೇರಿಸಲು ಅವರಿಗೆ ಆಗಿಲ್ಲ. ಆ ಬಗ್ಗೆ ಸಣ್ಣ ಪಶ್ಚಾತ್ತಾಪ ಬೇಡವೇ? ಭಾಷಣಗಳನ್ನು ಲಯಬದ್ಧವಾಗಿ, ಪ್ರಾಸಬದ್ಧವಾಗಿ ಮಾಡುವುದೇ ಅಭಿವೃದ್ಧಿ ಕೆಲಸಗಳೇ ಅಥವಾ ಆ ಪಕ್ಷ ಪದೇ ಪದೇ ಪ್ರಸ್ತಾಪಿಸುವ ದೇಶಪ್ರೇಮವೇ?

ಅನಘ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.