ADVERTISEMENT

ಹೇಳಿಕೆ ವಾಸ್ತವಕ್ಕೆ ಹತ್ತಿರವಿರಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 15:29 IST
Last Updated 21 ಜನವರಿ 2022, 15:29 IST

ಮಹೇಶ್ ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಪರಿಷತ್ತಿನ ಸದಸ್ಯತ್ವ ಶುಲ್ಕವನ್ನು ಪ್ರಸ್ತುತ ₹ 500ರಿಂದ ₹ 250ಕ್ಕೆ ಇಳಿಸುವುದಾಗಿ ಹಾಗೂ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಇರುವುದಾಗಿ ಹೇಳಿಕೆ ನೀಡಿದರು. ಪ್ರಸ್ತುತ ಕಸಾಪ ಸದಸ್ಯರಾಗ ಬಯಸುವವರಿಗೆ ಪರೀಕ್ಷೆ ನಡೆಸುವುದಾಗಿ ಹೇಳಿಕೆ ಬಂದಿದೆ.

ಪರೀಕ್ಷೆ ಮಾಡಬೇಕಾದರೆ ಮೊದಲು ರಾಜ್ಯ, ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರು ಪರೀಕ್ಷೆ ಎದುರಿಸಬೇಕಾಗುತ್ತದೆ. ಆಗ ಪ್ರಶ್ನೆಪತ್ರಿಕೆ ತಯಾರಿಸುವವರು ಯಾರು? ಅದರಲ್ಲಿ ಏನಿರಬೇಕು ಎಂಬ ಪ್ರಶ್ನೆಗಳು ಮೂಡುತ್ತವೆ. ಸರಿಯಾಗಿ ಪರೀಕ್ಷೆ ನಡೆದರೆ ಹೆಚ್ಚಿನ ಅಭ್ಯರ್ಥಿಗಳು ನಪಾಸಾಗಬಹುದು! ಹಾಗಾಗಿ ಅಧ್ಯಕ್ಷ ಸ್ಥಾನದಿಂದ ಬರುವ ಹೇಳಿಕೆಗಳು ವಾಸ್ತವಕ್ಕೆ ಹತ್ತಿರ ಇರಬೇಕಾಗುತ್ತದೆ.

–ಈ.ಬಸವರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.