ADVERTISEMENT

ವಾಚಕರ ವಾಣಿ | ತಿನಿಸಿನ ದರ ಕೈಸುಡುತ್ತಿದೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಫೆಬ್ರುವರಿ 2022, 20:00 IST
Last Updated 17 ಫೆಬ್ರುವರಿ 2022, 20:00 IST

ಬಹುತೇಕ ಹೋಟೆಲ್, ಬೇಕರಿಗಳು ಸದ್ದು, ಸೂಚನೆ ಇಲ್ಲದೆ ತಿನಿಸು, ಪಾನೀಯಗಳ ದರ ಹೆಚ್ಚಿಸಿಕೊಂಡಿವೆ. ಮಾತ್ರವಲ್ಲ ಅವುಗಳ ಗಾತ್ರ ಕೂಡ ಕಡಿಮೆಯಾಗಿದೆ. ಅಗಿಯುವ, ನುಂಗುವ ಶ್ರಮ ಶೇಕಡ ಇಪ್ಪತ್ತರಷ್ಟಾದರೂ ಈಗ ಕಡಿಮೆ! ಕೋವಿಡ್ ನಿಯಂತ್ರಣ ನಿಮಿತ್ತದ ಲಾಕ್‍ಡೌನ್ ಬಿಸಿ ಯಾರನ್ನು ತಾನೇ ಬಿಟ್ಟಿದೆ? ಎಲ್ಲರೂ ಕಷ್ಟ, ನಷ್ಟ ಅನುಭವಿಸಿದವರೇ. ಹಾಗಾಗಿ ಗ್ರಾಹಕರ ಹಿತಾಸಕ್ತಿ ಕಡೆಗಣಿಸಬಾರದು. ಆಗ ಅಷ್ಟು ಕಳೆದುಕೊಂಡೆವು, ಈಗ ಸರಿದೂಗಿಸಿಕೊಳ್ಳುತ್ತೇವೆ ಎನ್ನುವ ಧೋರಣೆ ತಕ್ಕುದಲ್ಲ.

1979ರ ಸುಮಾರು. ರಾಜ್ಯದಲ್ಲಿ ಆಗ ಅಧಿಕಾರದಲ್ಲಿದ್ದ ಸರ್ಕಾರ ಎಲ್ಲಾ ಹೋಟೆಲ್, ಬೇಕರಿಗಳು ತಿನಿಸುಗಳ ದರ ಪಟ್ಟಿಯನ್ನು (ತೂಕ ನಮೂದು ಕಡ್ಡಾಯ!) ಪ್ರದರ್ಶಿಸಿರಬೇಕೆಂದು ಆದೇಶಿಸಿತ್ತು. ಹಿಂದೆ ಸಂದ ಸರ್ಕಾರಗಳ ಮಾದರಿಗಳು ಪಕ್ಷಾತೀತವಾಗಿ ಪ್ರಸ್ತುತ ಆಳ್ವಿಕೆಯನ್ನು ಸಕಾರಾತ್ಮಕವಾಗಿ ಪ್ರಭಾವಿಸುವಲ್ಲಿ ಪ್ರಜಾಸತ್ತೆಯ ಸೊಗಡಿದೆ.

-ಬಿಂಡಿಗನವಿಲೆ ಭಗವಾನ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.