ADVERTISEMENT

ವಾಚಕರ ವಾಣಿ | ಧೈರ್ಯ ತುಂಬುವ ಕೆಲಸ ಆಗಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಆಗಸ್ಟ್ 2022, 21:15 IST
Last Updated 5 ಆಗಸ್ಟ್ 2022, 21:15 IST

ಮಳೆ ಈ ಸಲ ಮತ್ತೆ ರೈತರ ಬದುಕಿನ ಜೊತೆ ‘ಜೂಜಾಟ’ ಆಡಿದೆ. ಹೊಲ–ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಎಲ್ಲವನ್ನೂ ಮಳೆ ನುಂಗಿಹಾಕಿದೆ. ನಮ್ಮ ಪ್ರದೇಶವು ತೊಗರಿಯ ಕಣಜ ಎಂದೇ ಹೆಸರುವಾಸಿ. ಕಲಬುರಗಿಯಲ್ಲಿ ಕಳೆದ ತಿಂಗಳು, ಎಂಟು ದಿನ ಎಡೆಬಿಡದೆ ಮಳೆ ಸುರಿದಿತ್ತು. ಬಿಸಿಲಿಗಾಗಿ ರೈತರು ಮುಗಿಲಿನತ್ತ ಮುಖ ಮಾಡಿದ್ದರು. ಬಿಸಿಲು ಕಾಣಿಸಿಕೊಂಡಾಗ ಮುಖ ಅರಳಿತು. ಈಗ ಪುನಃ ಮಳೆ ಅಪ್ಪಳಿಸಿದೆ. ತೊಗರಿಬೆಳೆಗೆ ಚರಮಗೀತೆ ಹಾಡಿದೆ. ರೈತರ ಮುಖ ಬಾಡಿದೆ. ಆತ್ಮಸ್ಥೈರ್ಯ ಕುಗ್ಗಿದೆ.

‘ನಿಮ್ಮ ಜೊತೆ ಸರ್ಕಾರ ಇದೆ’ ಎಂದು ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು. ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು. ಮುಂದಿನ ಬೆಳೆಗೆ ಸಹಾಯಹಸ್ತ ಚಾಚುತ್ತೇವೆ ಎಂಬ ಭರವಸೆ ನೀಡಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು.

-ಮಹೇಶ ಕೇವಂಟಗಿ, ಕಲಬುರಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.