ADVERTISEMENT

ವಾಚಕರ ವಾಣಿ | ಹಿರಿಯರಿಗೆ ನೆಮ್ಮದಿಯ ಬದುಕು ಸಿಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಜುಲೈ 2022, 21:15 IST
Last Updated 31 ಜುಲೈ 2022, 21:15 IST

ಹಿರಿಯರಿಗೆ ನೆಮ್ಮದಿಯ ಬದುಕು ಸಿಗಲಿ

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷ ವಯಸ್ಸು ಮೀರಿದ ಹಿರಿಯ ನಾಗರಿಕರ ಪ್ರಮಾಣವು ಹೆಚ್ಚುತ್ತಿರುವುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿರಿಯ ನಾಗರಿಕರು ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುದು ಆರೋಗ್ಯ ಸಮಸ್ಯೆ. ನಿವೃತ್ತಿಯವರೆಗೂ ಕುಟುಂಬಕ್ಕಾಗಿ ದಣಿವರಿಯದೆ ದುಡಿದ ಹಿರಿಯ ಜೀವಗಳಿಗೆ ಇಳಿವಯಸ್ಸಿನಲ್ಲಿ ನಾನಾ ರೀತಿಯ ಕಾಯಿಲೆಗಳು ದೈಹಿಕವಾಗಿ ನೋವು ನೀಡಿದರೆ, ಕುಟುಂಬದವರ ನಿರ್ಲಕ್ಷ್ಯವು ಭಾವನಾತ್ಮಕವಾಗಿ ಬಾಧಿಸುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಬೇರೆ ಬೇರೆ ರೀತಿಯಲ್ಲಿ ಹಲವು ರಿಯಾಯಿತಿಗಳನ್ನು ನೀಡಿವೆಯಾದರೂ, ಬ್ಯಾಂಕು, ಅಂಚೆ ಕಚೇರಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಅವರು ಇರಿಸಿರುವ ಠೇವಣಿಗೆ ಕೊಡಮಾಡುವ ಬಡ್ಡಿದರವು ಕೆಲವು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಈಗ ತೀರಾ ಕಡಿಮೆ. ಎಷ್ಟೋ ಹಿರಿಯರು ಬಡ್ಡಿ ಹಣದಲ್ಲೇ ಜೀವನ ಸಾಗಿಸುತ್ತಿದ್ದು, ಬೆಲೆ ಏರಿಕೆಯ ಈ ದುಬಾರಿಯ ದಿನಗಳು ಅವರಿಗೆ ಮತ್ತಷ್ಟು ದುಬಾರಿಯಾಗಿವೆ. ಹಾಗಾಗಿ, ಹಿರಿಯರಿಗಾಗಿ ಪ್ರತ್ಯೇಕ ಆಸ್ಪತ್ರೆ, ಆಶ್ರಯ ತಾಣಗಳನ್ನು ಸರ್ಕಾರವು ತೆರೆದರೆ ಅವರ ಬದುಕಿಗೆ ಸ್ವಲ್ಪಮಟ್ಟಿಗಾದರೂ ಆಸರೆ ಸಿಗಬಹುದು.

ADVERTISEMENT

- ಕೆ‌.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.