ADVERTISEMENT

ವಾಚಕರ ವಾಣಿ: ಇದರಲ್ಲಿ ಯಾವುದು ಸತ್ಯ?!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಅಕ್ಟೋಬರ್ 2022, 21:31 IST
Last Updated 23 ಅಕ್ಟೋಬರ್ 2022, 21:31 IST

ಬಹುಜನರ ವಿರೋಧವನ್ನು ಪರಿಗಣಿಸಿ ಅಂತೂ ಸರ್ಕಾರವು ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರಿಂದ ತಿಂಗಳಿಗೆ ₹ 100 ದೇಣಿಗೆ ಸಂಗ್ರಹಿಸುವ ಆದೇಶವನ್ನು ಹಿಂಪಡೆದಿದೆ. ಇದು ಸ್ವಾಗತಾರ್ಹ. ಆದರೆ ‘ಈ ಕುರಿತು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ನನ್ನದಾಗಲೀ ಮುಖ್ಯಮಂತ್ರಿಯದ್ದಾಗಲೀ ಪಾತ್ರವಿಲ್ಲ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತದೆ! ಇಂಥ ಗಂಭೀರವಾದ ವಿಷಯದಲ್ಲಿ ಸಂಬಂಧಪಟ್ಟ ಸಚಿವರು ಅಥವಾ ಮುಖ್ಯಮಂತ್ರಿಯವರ ಗಮನಕ್ಕೆ ತಾರದೇ ಒಬ್ಬ ಅಧಿಕಾರಿ ಏಕಾಏಕಿ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡು ಇನ್ನೊಂದಿಲ್ಲ. ಅಕಸ್ಮಾತ್ ಹಾಗೇನಾದರೂ ಆಗಿದ್ದರೆ ಆ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿರುವಷ್ಟು ಅಸಹಾಯಕ ಸರ್ಕಾರ ಇದೆ ಎಂದಾದರೆ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ.

ಒಂದೋ ಈ ಸರ್ಕಾರ ಈ ಬಗ್ಗೆ ಸುಳ್ಳು ಹೇಳುತ್ತಿರಬೇಕು, ಇಲ್ಲ ಸರ್ಕಾರವು ತನ್ನ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾರದಷ್ಟು ದುರ್ಬಲವಾಗಿರಬೇಕು. ಇದರಲ್ಲಿ ಯಾವುದು ಸತ್ಯ?!

- ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರ್, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.