ADVERTISEMENT

ವಾಚಕರ ವಾಣಿ | ಬೆದರಿಸಲು ಅಸ್ತ್ರ ಇಲ್ಲದಂತಾದೀತು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಫೆಬ್ರುವರಿ 2022, 20:30 IST
Last Updated 15 ಫೆಬ್ರುವರಿ 2022, 20:30 IST

‘ಹಿಂದಿನ ಸರ್ಕಾರದ ಮುಖಂಡರ ಅಸಲಿ ಬಣ್ಣ ಬಯಲು ಮಾಡುವೆ’, ‘ಇವರ ಜಾತಕ ಬಿಚ್ಚಿಡುವೆ’ ಎಂಬೆಲ್ಲ ಪೌರುಷದ ಮಾತುಗಳನ್ನು ನಮ್ಮ ರಾಜಕೀಯ ನಾಯಕರು ಆಗಾಗ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಅಧಿಕಾರದ ರುಚಿ ಸವಿಯುತ್ತಿರುವಾಗ ಎಲ್ಲವೂ ಚಂದವಾಗಿಯೇ ಕಾಣಿಸುತ್ತಿರುತ್ತವೆ. ಕೈಯಲ್ಲಿ ಮಾಡಲು ಕೆಲಸವಿಲ್ಲದಾಗ ಈ ರೀತಿಯಲ್ಲಿ ಸುದ್ದಿಯಲ್ಲಿರಲು ಪ್ರಯತ್ನಿಸುವುದು ಹೊಸದೇನಲ್ಲ. ಇಂತಹ ನಡೆ ಸಲ್ಲದು.

ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅವರೂ ನಿಮ್ಮ ಬಣ್ಣ ಬಯಲು ಮಾಡಿದರೆ? ಬಯಲಿನಲ್ಲಿ ಅಷ್ಟೆಲ್ಲ ಬಣ್ಣಗಳನ್ನು ತುಂಬಲು ಜಾಗ ಇರಲಾರದು. ಅಷ್ಟೇ ಅಲ್ಲ, ಒಮ್ಮೆ ಬಯಲು ಮಾಡಿಬಿಟ್ಟರೆ ಮುಂದೆ ಬೆದರಿಸಲು ಅಸ್ತ್ರವೇ ಇಲ್ಲದಂತೆ ಆಗುವುದಿಲ್ಲವೇ?

-ಭರತ್ ಬಿ.ಎನ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.