ADVERTISEMENT

ಸಮಿತಿಯಲ್ಲಿ ಇರಲಿ ಮಾನವಶಾಸ್ತ್ರಜ್ಞ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 19:31 IST
Last Updated 11 ಮಾರ್ಚ್ 2021, 19:31 IST

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಮೀಸಲಾತಿ ಬೇಡಿಕೆಗಳ ಪರಿಶೀಲನೆಗಾಗಿ ರಾಜ್ಯ ಸರ್ಕಾರವು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ಅವರ ನೇತೃತ್ವದಲ್ಲಿ ತ್ರಿಸದಸ್ಯರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಆದರೆ ಸಮಿತಿಯಲ್ಲಿ ಮಾನವಶಾಸ್ತ್ರಜ್ಞರು ಇಲ್ಲದಿರುವುದು ಸಣ್ಣ ಕೊರತೆ ಎನಿಸುತ್ತದೆ.

ಯಾವುದೇ ಒಂದು ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸುವಾಗ ಪರಿಣತ ಮಾನವಶಾಸ್ತ್ರಜ್ಞರಿಂದ ‘ಕುಲಶಾಸ್ತ್ರೀಯ ಅಧ್ಯಯನ’ (ಎಥ್ನೋಗ್ರಫಿ ಸ್ಟಡಿ) ಅತ್ಯವಶ್ಯಕ ಮತ್ತು ಕಡ್ಡಾಯ ಎಂಬುದಾಗಿ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹಾಗಾಗಿ ಸಮಿತಿಯಲ್ಲಿ ಮಾನವಶಾಸ್ತ್ರಜ್ಞರನ್ನು ಸೇರ್ಪಡೆಗೊಳಿಸುವುದು ಒಳ್ಳೆಯದು.

-ಡಾ. ಬಿ.ಆರ್.ಮಂಜುನಾಥ ಬೆಂಡರವಾಡಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.