ADVERTISEMENT

ಬಿಚ್ಚು ಮನಸ್ಸಿನ ಮುಕ್ತ ಸಂವಾದವಾಗಲಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 18:10 IST
Last Updated 15 ಆಗಸ್ಟ್ 2019, 18:10 IST

ದೇಶದಲ್ಲಿ ಇತ್ತೀಚೆಗೆ ಎಡಪಂಥೀಯರು ಮತ್ತು ಬಲಪಂಥೀಯರ ನಡುವೆ ಹೆಚ್ಚಿನ ಕಂದಕವೇರ್ಪಟ್ಟಿದೆ. ಪರಸ್ಪರ ದೂಷಣೆಯಲ್ಲಿ ತೊಡಗಿರುವ ಇಬ್ಬರಿಗೂ ತಮ್ಮ ಸೈದ್ಧಾಂತಿಕ ಭಿನ್ನತೆಗಾಗಿ ಸತ್ಯಕ್ಕಿಂತ ವಾದವೇ ಮುಖ್ಯವಾಗಿದೆ.

ಸಾಣೇಹಳ್ಳಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಬಗೆಗೆ ಕೆ.ನೀಲಾ ಅವರ ಆಕ್ಷೇಪ ವ್ಯಕ್ತವಾದ ತರುವಾಯ, ರಾಜಾರಾಮ ತೋಳ್ಪಾಡಿ ಹಾಗೂ ನಿತ್ಯಾನಂದ ಶೆಟ್ಟಿ ತಮ್ಮ ಲೇಖನದಲ್ಲಿ (ಪ್ರ.ವಾ., ಆ. 9) ಎರಡು ಪಂಥೀಯರೂ ಸಂವಾದಿಸಲು ಆಗದೇ ಇರುವಷ್ಟು ಮಡಿ- ಮೈಲಿಗೆ ಇರುವುದನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೀನಾಕ್ಷಿ ಬಾಳಿ (ಸಂಗತ, ಆ. 15) ಬಲಪಂಥೀಯರ ಜೊತೆಗೆ ಸಂವಾದ ಸಾಧ್ಯವಿಲ್ಲವೆಂದು ಹೇಳಿ, ಸಂಧಾನದ ಬಾಗಿಲನ್ನು ಬಂದ್ ಮಾಡಿದ್ದಾರೆ.

‘ಕಸವರಮೆಂಬುದು ನೆರೆ ಸೈರಿಸಲಾಪರೊಡೆ ಪರ ವಿಚಾರಮುಂ, ಧರ್ಮಮುಮಂ’ ಎಂಬ ಕವಿರಾಜಮಾರ್ಗಕಾರನ ಆಶಯದಂತೆ, ಇಬ್ಬರಿಗೂ ಬೇಕಾಗಿರುವುದು ಇನ್ನೊಬ್ಬರ ವಿಚಾರವನ್ನು ಸಹಿಷ್ಣುಗಳಾಗಿ ಕೇಳಿಸಿಕೊಳ್ಳುವುದಾಗಿದೆ. ಕಾಲಪ್ರವಾಹದಲ್ಲಿ ನೀರು ಸಾಕಷ್ಟುಹರಿದಾಗಿದೆ. ಈರ್ಷ್ಯೆ, ಅಸೂಯೆ ಎಂದಿಗೂ ಉಳಿಯುವುದಿಲ್ಲ. ಶಾಂತಿ, ಸಹಬಾಳ್ವೆ, ವಿಶ್ವಭ್ರಾತೃತ್ವ, ದೇವನೂರರ ‘ಸಂಬಂಜ ಅನ್ನಾದು ದೊಡ್ಡದು ಕನಾ’ ಎಂಬ ಅರಿವು ಇಬ್ಬರಿಗೂ ಬಾಳದೀವಿಗೆಯಾಗಲಿ.

ADVERTISEMENT

ಡಾ. ರುದ್ರೇಶ್ ಅದರಂಗಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.