ADVERTISEMENT

‘ಪ್ರಜಾವಾಣಿ’ಯ ಫೋನ್‌ ಇನ್‌– ನೇರಾನೇರ ಸಂವಾದ ಅರ್ಥಪೂರ್ಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:46 IST
Last Updated 9 ಸೆಪ್ಟೆಂಬರ್ 2019, 19:46 IST

‘ಪ್ರಜಾವಾಣಿ’ಯ ಫೋನ್‌ ಇನ್‌ ಕಾರ್ಯಕ್ರಮದಲ್ಲಿ (ಸೆ.7) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಒಬ್ಬ ಸಚಿವರಂತೆ ವರ್ತಿಸದೆ, ಒಳ್ಳೆಯ ಕೇಳುಗರಾಗಿದ್ದರು. ಇದರಿಂದ ಅನೇಕರು ಸಂಕೋಚ, ಭಯ ಇಲ್ಲದೆ ತಮ್ಮ ಸಂದೇಹಗಳನ್ನು ಹಂಚಿಕೊಂಡರು. ಎಲ್ಲರ ಪ್ರಶ್ನೆಗಳಿಗೆ ಕಿವಿಯಾಗಿ, ಸಲಹೆಗಳನ್ನು ಸ್ವತಃ ದಾಖಲಿಸಿಕೊಳ್ಳುತ್ತಾ, ಕೆಲವರಿಗೆ ‘ಕಚೇರಿಗೆ ಬನ್ನಿ ಇಲ್ಲವೇ ಮನೆಗೆ ಬನ್ನಿ’ ಎಂದು ಹೇಳುತ್ತಾ, ಮತ್ತೆ ಕೆಲವು ಪ್ರಶ್ನೆಗಳಿಗೆ ‘ಮಾಹಿತಿಯನ್ನು ವಾಟ್ಸ್ಆ್ಯಪ್‌ಗೆ ಹಾಕಿ’ ಎನ್ನುತ್ತಾ ತಮ್ಮ ಫೋನ್‌ ನಂಬರ್‌ ಕೊಟ್ಟು ಕಾರ್ಯಕ್ರಮ ನಡೆಸಿಕೊಟ್ಟ ಪರಿ ಅಚ್ಚರಿ ಹುಟ್ಟಿಸಿತು. ಎಲ್ಲ ಕೊರತೆಗಳಿಗೂ ಒಮ್ಮೆಗೇ ಪರಿಹಾರ ಅಸಾಧ್ಯವಾದರೂ ಹಲವರಿಗೆ ಸಚಿವರೊಂದಿಗೆ ನೇರಾನೇರ ಮಾತನಾಡುವುದು ಅಸಾಧ್ಯದ ಮಾತಾಗಿರುತ್ತದೆ. ಈ ಕಾರ್ಯಕ್ರಮ ಅಂತಹದ್ದೊಂದು ಸದವಕಾಶಕ್ಕೆ ಕಾರಣವಾಯಿತು. ಮುಂದೆ, ಸಚಿವರನ್ನು ಸುಲಭವಾಗಿ ಭೇಟಿ ಮಾಡುವ ಅವಕಾಶವೂ ಇದರಿಂದ ಕೆಲವರಿಗೆ ಲಭ್ಯವಾಯಿತು.

ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT